ಹೊಸದಿಗಂತ ಡಿಜಿಟಲ್ ಡೆಸ್ಕ್;
ಮೈಸೂರಿನಲ್ಲಿ ಡಾಲಿ ಧನಂಜಯ್ ಹಾಗೂ ಧನ್ಯತಾ ಅದ್ಧೂರಿ ರಿಸೆಪ್ಷನ್ ನಡೆಯುತ್ತಿದೆ. ಹಲವಾರು ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು ಭಾಗಿ ಆಗಿ ಶುಭಹಾರೈಸುತ್ತಿದ್ದಾರೆ.
ಟ ಶ್ರೀಮುರುಳಿ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, ನಾಗತಿಹಳ್ಳಿ ಚಂದ್ರಶೇಖರ್ ದಂಪತಿ ಹಾಗೂ ಸಚಿವ ಜಮೀರ್ ಸೇರಿದಂತೆ ಅನೇಕರು ಆರತಕ್ಷತೆಗೆ ಬಂದು ಶುಭಕೋರಿದ್ದಾರೆ.
ಶುಭ ಹಾರೈಸಿದ ಬಳಿಕ ಮಾತಾಡಿದ ನಟ ಶ್ರೀಮುರುಳಿ, ಇವತ್ತು ಧನಂಜಯ್ ಗೆ ಒಳ್ಳೆಯ ದಿನ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೆಂಡತಿ ಬಂದ ಮೇಲೆ ಅದು ಬ್ಯೂಟಿಫುಲ್ ಲೈಫ್, ಹೊಸ ಲೈಫ್ ಗೆ ಕಾಲಿಡುತ್ತಿರುವ ಧನಂಜಯ್ ಒಳ್ಳೆಯದಾಗಲಿ ಎಂದು ಶ್ರೀಮುರುಳಿ ಹಾರೈಸಿದ್ದಾರೆ.
ಡಾಲಿ ಮದುವೆಗೆಂದು ಬೃಹತ್ ಗಾತ್ರದ ಸೆಟ್ ಕೂಡ ಹಾಕಲಾಗಿದೆ. ಖ್ಯಾತ ನಟ, ಕಲಾ ನಿರ್ದೇಶಕ ಅರುಣ್ ಸಾಗರ್ ಅವರು ಡಾಲಿ ಧನಂಜಯ್ ಹಾಗೂ ಧನ್ಯತಾ ಮದುವೆಗೆ ಎರಡು ಬೃಹತ್ ಸೆಟ್ ನಿರ್ಮಾಣ ಮಾಡಿದ್ದಾರೆ.