ಹೊಸದಿಗಂತ ಡಿಜಿಟಲ್ ಡೆಸ್ಕ್ :
ಸುಮಾರು ಎಂಟು ದಶಕಗಳಿಂದ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಲಾಗಿದ್ದ ಪರಿಶಿಷ್ಟ ಜಾತಿಯ ಸಮುದಾಯದ ಜನರಿಗೆ ದೇವಾಲಯಕ್ಕೆ ಪ್ರವೇಶ ನೀಡಿರುವ ವಿಶೇಷ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ತೆನ್ಮುಡಿಯನೂರು ಗ್ರಾಮದ ಮುತ್ತುಮಾರಿಯಮ್ಮನ್ ದೇವಸ್ಥಾನಕ್ಕೆ ಪರಿಶಿಷ್ಟ ಜಾತಿಯ (ಎಸ್‌ಸಿ) ಸುಮಾರು 200 ಕ್ಕೂ ಹೆಚ್ಚು ಜನರನ್ನು ತಿರುವಣ್ಣಾಮಲೈ ಜಿಲ್ಲೆಯ ಪೊಲೀಸರು ಮತ್ತು ಜಿಲ್ಲಾಡಳಿತವು ದೇವಾಲಯಕ್ಕೆ ಪೂಜೆಗಾಗಿ ಕರೆದೊಯ್ದಿದ್ದಾರೆ.
ತಮ್ಮ ಜೀವನದಲ್ಲಿ ಒಮ್ಮೆಯಾದರೂ ಮಾರಿಯಮ್ಮನ್ ದೇವಾಲಯಕ್ಕೆ ಪೂಜೆ ಸಲ್ಲಿಸಬೇಕು ಎಂಬುದು ಅವರ ಆಶಯವಾಗಿತ್ತು. ದೇವಾಲಯಕ್ಕೆ ಮಹಿಳೆಯರು ದೇವರಿಗೆ ಹಾರ, ಉರುವಲು ಮತ್ತು ಪೊಂಗಲ್ ತಯಾರಿಸಲು ಪದಾರ್ಥಗಳನ್ನು ಹೊತ್ತೊಯ್ದರು.
80 ವರ್ಷಗಳ ಹಿಂದಿನ ಆಸೆಯನ್ನು ಸೋಮವಾರ ಜಿಲ್ಲಾಧಿಕಾರಿ ಬಿ ಮುರುಗೇಶ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಕೆ ಕಾರ್ತಿಕೇಯನ್ ನೇತೃತ್ವದಲ್ಲಿ ಎಸ್‌ಸಿ ಸಮುದಾಯದ ಸದಸ್ಯರನ್ನು ದೇವಸ್ಥಾನದೊಳಗೆ ಪ್ರವೇಶಿಸುವ ಮೂಲಕ ಪೂರೈಸಲಾಗಿದೆ.