ದರಕಾಸ್ತು ಪೋಡಿ ಆಂದೋಲನ: ಹಾಸನ ಜಿಲ್ಲೆಗೆ ನಂಬರ್ 1 ಪಟ್ಟ! 

ಹೊಸದಿಗಂತ ಡಿಜಿಟಲ್ ಡೆಸ್ಕ್:
ದರಕಾಸ್ತು ಪೋಡಿ ಆಂದೋಲನದಲ್ಲಿ ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಇದಕ್ಕೆ ಶ್ರಮವಹಿಸಿದ ಎಲ್ಲರಿಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎನ್ ರಾಜಣ್ಣ ಅಭಿನಂದನೆ ಸಲ್ಲಿಸಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಇಂದು ಇ – ಪೌತಿ ಖಾತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಎರಡು ತಲೆಮಾರಿನ ರೈತರು ಖಾತೆ ಮಾಡಿಸಲು ಆಗದೆ ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದರು ಇದೀಗ ಇ – ಪೌತಿಖಾತೆ ಮಾಡಲು ಸರ್ಕಾರ ಮುಂದಾಗಿದ್ದು ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಜಿಲ್ಲೆಯಲ್ಲಿ 20 ಲಕ್ಷ ಸರ್ವೆ ನಂಬರ್ ಗಳ ಪೈಕಿ 2 ಲಕ್ಷ 78 ಸಾವಿರ ಪೌತಿಖಾತೆ ಬಾಕಿ ಉಳಿದಿದೆ ಅವುಗಳನ್ನು ಅತೀ ಶೀಘ್ರವಾಗಿ ಮುಗಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!