ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲಿಗೆ ಹೋಗಿಬಂದಿರುವ ನಟ ದರ್ಶನ್ ನ್ಯಾಯಾಲಯದಿಂದ ಕೊಡಲಾದ ಜಾಮೀನಿನ ಮೇಲೆ ಹೊರಗೆ ಬಂದು ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದಾರೆ.
ಕೋರ್ಟ್ ಜಾಮೀನು ನೀಡುವ ವೇಳೆ ಆಗಿಂದಾಗ್ಗೆ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಬೇಕು, ಎಂದು ಷರತ್ತು ಹಾಕಲಾಗಿತ್ತು. ಆದರೆ ಈಗ ಕೇಸ್ ವಿಚಾರಣೆಗೆ ಬರುವಂತೆ ನೊಟೀಸ್ ನೀಡಿದರೆ, ಬೆನ್ನು ನೋವಿದೆ ಎಂದು ಸಬೂಬು ಹೇಳಿ ಕೋರ್ಟ್‌ಗೆ ಬಾರದೆ, ಸ್ನೇಹಿತನ ಸಿನಿಮಾವನ್ನು ನೋಡಲು ಥಿಯೇಟರ್‌ಗೆ ಹಾಜರಾಗಿದ್ದಾರೆ.
ಕೇವಲ ಎರಡು ದಿನಗಳ ಹಿಂದೆ ಕೋರ್ಟ್ ವಿಚಾರಣೆಗೆ ಹಾಜರಾಗದೆ ವಿನಾಯಿತಿ ಕೋರಿದ್ದ ಆರೋಪಿ ದರ್ಶನ್, ಕೇವಲ ಒಂದು ದಿನದ ಅಂತರದಲ್ಲಿ ಗತ್ತಿನಿಂದಲೇ ಬಂದು ತನ್ನ ಆಪ್ತ ಧನ್ವೀರ್ ನಟನೆಯ ವಾಮನ ಸಿನಿಮಾದ ವಿಶೇಷ ಶೋವನ್ನು 3 ಗಂಟೆಗಳ ಕಾಲ ಕುಳಿತು ವೀಕ್ಷಣೆ ಮಾಡಿದ್ದಾರೆ.
ಕೋರ್ಟ್‌ಗೆ ಗೌರವ ಸಿನಿಮಾ ನೋಡಲು ಹೋಗಿರುವುದಕ್ಕೆ ಭಾರೀ ಆರೋಪಗಳು ಕೇಳಿಬಂದಿದೆ.