ದರ್ಶನ್​ ಫ್ಯಾನ್ಸ್​-ನಟಿ ರಮ್ಯಾ ಕೇಸ್: 80 ವರ್ಷದ ಇತಿಹಾಸವಿರೋ ಇಂಡಸ್ಟ್ರಿ ಹೆಸರು ಹಾಳು ಮಾಡ್ಬೇಡಿ ಎಂದ ನಟ ಜಗ್ಗೇಶ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್;

ನಟಿ ರಮ್ಯಾಗೆ ದರ್ಶನ್​ ಫ್ಯಾನ್ಸ್​ ಪೇಜ್​ನಿಂದ ಅಶ್ಲೀಲ ಸಂದೇಶ ರವಾನೆ ಆಗುತ್ತಿದ್ದು,ಈ ಕುರಿತು ಕೇಸ್ ಕೂಡ ದಾಖಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ರಮ್ಯಾಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಇದರ ನಡುವೆ ನಟ ಜಗ್ಗೇಶ್ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, 80 ವರ್ಷದ ಇತಿಹಾಸವಿರೋ ಇಂಡಸ್ಟ್ರಿ ಹೆಸರು ಹಾಳು ಮಾಡ್ಬೇಡಿ. ಒಗಟ್ಟಾಗಿ ಇರುವಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಅನ್ಯಭಾಷಿಕರು ನಮ್ಮ ನೋಡಿ ನಗುವಂತಾಗಿದೆ. ಲೈಕ್, ಪ್ರಮೋಷನ್ನಿಂದ ಯಾರೂ ಬೆಳೆಯಲ್ಲ.. ಕ್ಷೇತ್ರಕ್ಕೆ ವಿಧೇಯರಾಗಿ ಕೆಲಸ ಮಾಡ್ಬೇಕು ಅಂತಾ ತಿಳಿವಳಿಕೆ ಹೇಳಿದ್ದಾರೆ.

ಕುಂಬಾರನಿಗೆ ವರ್ಷ ಒಡೆಯುವವನಿಗೆ ನಿಮಿಷ! 80 ವರ್ಷದ ಚಿತ್ರರಂಗ ಬೆಳೆಸಿ ಕೆಡವಬೇಡಿ! ಅವರವರು ಅವರ ಜೀವನದ ಮೇಲೆ ಗಮನಹರಿಸಿ ಇನ್ನೊಬ್ಬರ ತಂಟೆ ತಕರಾರು ಏಕೆ ಬೇಕು? ಕೆಣಕಿದರೆ ದ್ವೇಷ ನಕ್ಕರೆ ಸ್ನೇಹ ಅಲ್ಲವೆ! ಅನ್ಯಭಾಷಿಗರು ನಮ್ಮ ನೋಡಿ ನಗುತ್ತಿದ್ದಾರೆ. ಲೈಕ್ಸ್ ಅಥವ ಪ್ರಮೋಷನ್ ಬೇಕು ಅಂದರೆ ಮೊಬೈಲ್ ಆನ್ ಮಾಡಿ ಮಾತಾಡಿದರೆ ನಾನು ಮೇಲೆ ಬರುವೆ ಎಂಬ ಭ್ರಮೆ ಹೆಚ್ಚಾಗಿದೆ ಹಾಗು ಇಂಥಹ ಕಾರ್ಯ ಕ್ಷಣಿಕ, ಜನ ಬೇಗ ಮರೆಯುತ್ತಾರೆ! ಅದರ ಬದಲು ನಿಮ್ಮ ಕೇತ್ರಕ್ಕೆ ವಿಧೇಯರಾಗಿ ಉತ್ತಮ ಕಾರ್ಯಮಾಡಿ ಜನ ವರ್ಷಗಳು ನಿಮ್ಮ ನೆನೆಯುತ್ತಾರೆ, ಹಿರಿಯರ ಶ್ರಮದ ಚಿತ್ರರಂಗ ಇಂದು ಆಡಿಕೊಳ್ಳುವರ ಗಿಳಿಪಾಠವಾಗಿದೆ! ಒಂದುಗಾದೆ. ದಯಮಾಡಿ ಉಧ್ಯಮದ ಉದ್ಧಾರದ ಚಿಂತೆ ಮಾಡಿ ಪ್ರೇಕ್ಷಕರ ಸಂತೋಷ ಪಡಿಸುವ ಸಿರಿಗನ್ನಡದ ಕಲಾಬಂಧು.

Life is beautiful.. ಮನುಷ್ಯರು ಸಾವಿರ ವರ್ಷ ಬದುಕೋಲ್ಲಾ. ನಾವು ಹುಡುಕಬೇಕಾದದ್ದು ಹಣ ಹೆಸರು ಅಲ್ಲಾ ನೆಮ್ಮದಿಯನ್ನ . ನೆಮ್ಮದಿ ಸಿಗೋದು ಹೋರಾಟ ದ್ವೇಷ ಜಗಳದಿಂದ ಅಲ್ಲಾ! ಪ್ರೀತಿಯಿಂದ. ಹಾಗಾಗಿ ದಿನ ಪ್ರೀತಿ ಹಾಗು ಪ್ರೀತಿಸುವ ಅಂಶ ಹುಡುಕಿ ನಗುತ್ತ ಸಂತೋಷದಿಂದ ಬಾಳಿ! ಇಂದಿನ ಸಾಮಾಜಿಕ ತಾಣ ಮೆನೆಗೆ ಮನಸ್ಸಿಗೆ ಬೆಂಕಿ ಹಚ್ಚುವ ತಾಣವಾಗಿದೆ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!