ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ನಟ ದರ್ಶನ್ ಜೈಲಿನಲ್ಲಿದ್ದಾರೆ. ದರ್ಶನ್ಗೆ ಕೈದಿ ಸಂಖ್ಯೆ ಕೂಡ ನೀಡಲಾಗಿದೆ.
ಅಭಿಮಾನಿಯೊಬ್ಬ ತಮ್ಮ ಮಗುವಿಗೆ ಕೋಳ, ಕೈದಿ ಸಂಖ್ಯೆ ಹಾಗೂ ಜೈಲಿನ ಬಟ್ಟೆ ರೀತಿಯ ಬಟ್ಟೆ ಹಾಕಿಸಿ ಫೋಟೊಶೂಟ್ ಮಾಡಿಸಿದ್ದು, ಫೋಟೊಸ್ ಎಲ್ಲೆಡೆ ವೈರಲ್ ಆಗಿದೆ.
ಮಗುವಿನ ಪೊಟೋ ಶೂಟ್ ಮಾಡಿಸಿದರಿಗೆ ಬಿಸಿ ಮುಟ್ಟಿಸಲು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮುಂದಾಗಿದೆ. ಈ ವಿಚಾರ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದೆ. ಈಗ ಪೊಲೀಸ್ ಇಲಾಖೆಯ ಮೂಲಕ ಪೋಷಕರ ಪತ್ತೆ ಕಾರ್ಯಕ್ಕೆ ಮುಂದಾಗಿದೆ.