ಕರ್ಸಿ ಅವಾಝ್‌ ಹಾಕಿದಿನಿ, ಕೊಲೆ ಮಾಡಿಲ್ಲ, ಯಾರು ಮಾಡಿದಾರೋ ಗೊತ್ತಿಲ್ಲ ಎಂದ ದರ್ಶನ್‌

ಹೊಸದಿಗಂತ ಡಿಜಿಟಲ್ ಡೆಸ್ಕ್‌:

ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್‌ ಕೇಸ್‌ಗೆ ಸಂಬಂಧಿಸಿದಂತೆ ಆರೋಪಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ.

ಈ ಬಗ್ಗೆ ದರ್ಶನ್‌ ಮಾತನಾಡಿದ್ದು, ಪವನ್​ನಿಂದ ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿರೋದು ಗೊತ್ತಾಯ್ತು. ಅದಕ್ಕೆ ರೇಣುಕಾಸ್ವಾಮಿಯನ್ನು ಕರೆತರುವಂತೆ ರಾಘವೇಂದ್ರನಿಗೆ ಸೂಚಿಸಿದೆ. ಶನಿವಾರ ಸಂಜೆ ರೇಣುಕಾಸ್ವಾಮಿಯನ್ನು ಶೆಡ್​ನಲ್ಲಿ ಭೇಟಿಯಾದೆ. ಇನ್ನೊಂದು ಸಲ ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿದ್ರೆ ಸರಿ ಇರಲ್ಲ ಎಂದು ವಾರ್ನ್ ಮಾಡಿದೆ.

ದುಡ್ಡು ಕೊಟ್ಟು ಊಟ ಮಾಡ್ಕೊಂಡು ಊರು ಸೇರುವಂತೆ ಹೇಳಿ ಹೊರಟು ಹೋದೆ. ನಾನು ಈ ಕೊಲೆಯನ್ನು ಮಾಡಿಲ್ಲ. ನನಗೂ ಇದಕ್ಕೂ ಸಂಬಂಧವಿಲ್ಲ. ಯಾರು ಕೊಲೆ ಮಾಡಿದ್ದಾರೋ ಅಥವಾ ಹೊಡೆದಾಗ ಆತ ಸತ್ತುಹೋಗಿದ್ದಾನೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!