ಬೇಲ್‌ ಮೇಲೆ ಹೊರಬಂದ ದರ್ಶನ್‌, ಯಾವ ರೂಲ್ಸ್‌ ಫಾಲೋ ಮಾಡ್ಬೇಕು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದ ದರ್ಶನ್ ಅವರು 131 ದಿನಗಳ ಬಳಿಕ ಜೈಲಿನಿಂದ ಹೊರ ಬರುತ್ತಿದ್ದಾರೆ. ಅವರು ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದಾರೆ. ಕರ್ನಾಟಕ ಹೈಕೋರ್ಟ್ ದರ್ಶನ್ ಅವರಿಗೆ 6 ವಾರಗಳ ಮಧ್ಯಂತ ಜಾಮೀನನ್ನು ನೀಡಿದೆ. ಈ ಅವಧಿಯನ್ನು ಅವರು ಕೇವಲ ಚಿಕಿತ್ಸೆಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕಿದೆ.

ಮಧ್ಯಂತರ ಜಾಮೀನು ಸಿಗುತ್ತಿದ್ದಂತೆ ದರ್ಶನ್ ಅವರು ಖುಷಿ ಹೊರ ಹಾಕಿದ್ದಾರೆ. ದರ್ಶನ್​ಗೆ ಈಗ ಜಾಮೀನು ನೀಡಿರುವುದು ಸಂಪೂರ್ಣವಾಗಿ ವೈದ್ಯಕೀಯ ವರದಿ ಆಧರಿಸಿಯೇ ಆಗಿದೆ. ಹೀಗಾಗಿ, ಅವರು ಮುಂದಿನ ಆರು ವಾರಗಳನ್ನು ಸಂಪೂರ್ಣವಾಗಿ ಚಿಕಿತ್ಸೆಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕಿದೆ. ಅವರು ಶೂಟಿಂಗ್‌ ಅಥವಾ ಇನ್ಯಾವುದೇ ಕೆಲಸ ಮಾಡುವಂತಿಲ್ಲ.

ದರ್ಶನ್ ಅವರಿಗೆ ಜಾಮೀನು ನೀಡಿದ ಬಳಿಕ ಕೆಲವು ಷರತ್ತುಗಳನ್ನು ಹಾಕಿದೆ. ದರ್ಶನ್ ಇಷ್ಟಪಟ್ಟ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬಹುದಾಗಿದೆ. ಅಲ್ಲದೆ, ಒಂದು ವಾರಗಳಲ್ಲಿ ಚಿಕಿತ್ಸೆಯ ವಿವರವನ್ನು ದರ್ಶನ್​ ಕೋರ್ಟ್​ಗೆ ಸಲ್ಲಿಕೆ ಮಾಡಬೇಕಿದೆ.

ಈ ರೀತಿಯ ಪ್ರಕರಣದಲ್ಲಿ ಹೊರ ಬಂದ ಬಳಿಕ ಆರೋಪಿಗಳು ವಿದೇಶಕ್ಕೆ ಹಾರುವ ಸಾಧ್ಯತೆ ಇರುತ್ತದೆ. ಹಾಗಾದಲ್ಲಿ ಅವರನ್ನು ಮರಳಿ ತರೋದು ಕಷ್ಟ. ಹೀಗಾಗಿ ಪಾಸ್​​ಪೋರ್ಟ್​ನ ಕೋರ್ಟ್​ಗೆ ಸರೆಂಡರ್ ಮಾಡಬೇಕು ಎಂದು ಕೋರ್ಟ್ ದರ್ಶನ್​ಗೆ ಸೂಚನೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!