ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೆ ಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್ ನಲ್ಲಿ ಇಂದು ಅಂಬರೀಷ್ ಮೊಮ್ಮಗನ ನಾಮಕರಣ ಶಾಸ್ತ್ರ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಕುಟುಂಬಸ್ಥರು ಹಾಗೂ ಆತ್ಮೀಯರಿಗಷ್ಟೇ ಆಹ್ವಾನ ನೀಡಿದ್ದಾರೆ ಅಂಬಿ ಕುಟುಂಬ.
ಅಭಿಷೇಕ್ ಅಂಬರೀಷ್ ಮಗನ ನಾಮಕರಣ ಶಾಸ್ತ್ರಕ್ಕೆ ನಟ ದರ್ಶನ್ ಬರಬಹುದು, ಯಶ್ ಬರಬಹುದು ಎಂಬ ನಿರೀಕ್ಷೆ ಸಹಜವಾಗಿಯೇ ಹಲವರಲ್ಲಿ ಇತ್ತು. ಆದರೆ ಕಾದವರಿಗೆಲ್ಲ ನಿರಾಸೆಯಾಗಿದೆ.
ನಟರಾದ ಯಶ್ ಹಾಗೂ ದರ್ಶನ್ ಇಬ್ಬರೂ ಸಿನಿಮಾ ಶೂಟಿಂಗ್‌ಗಳಲ್ಲಿ ಬ್ಯುಸಿ ಇದ್ದಾರೆ. ಯಶ್ ಟಾಕ್ಸಿಕ್ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರೆ, ದರ್ಶನ್ ಅವರು ದಿ ಡೆವಿಲ್ ಶೂಟಿಂಗ್‌ನಲ್ಲಿ ಮೈಸೂರಿನಲ್ಲಿ ಬ್ಯುಸಿ ಆಗಿದ್ದಾರೆ. ಈ ಮೂಲಕ ದರ್ಶನ್ ಅವರ ‘ಮದರ್ ಇಂಡಿಯಾ’ ಮೊಮ್ಮಗನ ನಾಮಕರಣದಲ್ಲಿ ಜೋಡೆತ್ತು ನಾಪತ್ತೆ ಆಗಿದ್ದಾರೆ.