ಹೊಸದಿಗಂತ ಡಿಜಿಟಲ್ ಡೆಸ್ಕ್:
ದರ್ಶನ್ ಪತ್ನಿ ವಿಜಯಲಕ್ಷ್ಮಿ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಕಾಲ ಕಳೆದಿದ್ದಾರೆ. ಇದೀಗ ಬಿಳಿ ಕುದುರೆಯೊಂದಿಗೆ ಕ್ಲಿಕ್ಕಿಸಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿಜಯಲಕ್ಷ್ಮಿ ಬಿಡುವು ಸಿಕ್ಕ ಹಿನ್ನೆಲೆ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಖುಷಿಯಿಂದ ಕಾಲ ಕಳೆದಿದ್ದಾರೆ. ಬಿಳಿ ಕುದುರೆ ಜೊತೆ ನಿಂತು ಖುಷಿಯಿಂದ ಪೋಸ್ ನೀಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೇಲ್ ಮೇಲೆ ದರ್ಶನ್ ಹೊರಬಂದ್ಮೇಲೆ ಪತಿಯ ವ್ಯವಹಾರವನ್ನು ವಿಜಯಲಕ್ಷ್ಮಿ ಅವರೇ ನೋಡಿಕೊಳ್ತಿದ್ದಾರೆ ಜೊತೆಗೆ ಸಹೋದರ ದಿನಕರ್ ಜೊತೆಯಾಗಿರುತ್ತಾರೆ.