ರವಾ ಕೇಸರಿಬಾತ್ ಮಾಡಲು ಬೇಕಾಗುವ ಸಾಮಗ್ರಿಗಳು:
ಸಣ್ಣರವೆ
ತುಪ್ಪ
ಸನ್‌ಫ್ಲವರ್ ಆಯಿಲ್
ಎರಡು ಕಪ್ ಸಕ್ಕರೆ
ಗೋಡಂಬಿ
ಒಣದ್ರಾಕ್ಷಿ
ಕೇಸರಿ ಬಣ್ಣ
ಏಲಕ್ಕಿ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
ರವಾ ಕೇಸರಿ ಬಾತ್ ತಯಾರಿಸುವ ವಿಧಾನ:
ಮೊದಲು ಒಂದು ಬಾಣಲೆಯಲ್ಲಿ ತುಪ್ಪ ಹಾಕಿ, ನಂತರ ಗೋಡಂಬಿ, ಒಣದ್ರಾಕ್ಷಿಯನ್ನು ಹಾಕಿ ಪಕ್ಕಕ್ಕೆ ಇಟ್ಟುಕೊಳ್ಳಿ. ಆ ಬಳಿಕ ಮತ್ತೊಂದು ಬಾಣಲೆಗೆ ತುಪ್ಪ ಹಾಗೂ ಎಣ್ಣೆ ಹಾಕಿ ರವೆಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ.
ಬಳಿಕ ಅಗತ್ಯವಿರುವಷ್ಟು ನೀರು ಸೇರಿಸಿ ಗಂಟಾಗದಂತೆ ಕೈಯಾಡಿಸಿಕೊಳ್ಳಿ. ಇದಕ್ಕೆ ಕೇಸರಿ ಬಣ್ಣ, ಏಲಕ್ಕಿ ಪುಡಿ, ಸಕ್ಕರೆ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಲು ಬಿಡಿ.
ಫ್ರೈ ಮಾಡಿದ್ದ ಗೋಡಂಬಿ, ದ್ರಾಕ್ಷಿ ಹಾಕಿದರೆ ರವಾ ಕೇಸರಿ ಸವಿಯಲು ಸಿದ್ಧ.