Sunday, January 11, 2026

ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ಮದುಗೆ ಡೇಟ್‌ ಫಿಕ್ಸ್‌, ಹುಡುಗಿ ಯಾರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟೀಮ್‌ ಇಂಡಿಯಾದ ಮಾಜಿ ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ರ ಪುತ್ರ, ಯುವ ಕ್ರಿಕೆಟಿಗ ಅರ್ಜುನ್‌ ತೆಂಡುಲ್ಕರ್‌ ಈ ವರ್ಷ ಮಾರ್ಚ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ.

ಮುಂಬೈನ ಖ್ಯಾತ ಉದ್ಯಮಿ ರವಿ ಘೈ ಅವರ ಮೊಮ್ಮಗಳು ಸಾನ್ಯಾ ಚಂದೋಕ್‌ ಅವರೊಂದಿಗೆ ಮಾ.5ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗಿದೆ.

ಮಾ.3ರಂದೇ ಮದುವೆ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಈಗಾಗಲೇ ಸಿದ್ಧತೆ ಶುರುವಾಗಿದೆ. ಮುಂಬೈನಲ್ಲಿ ವಿವಾಹ ನಡೆಯಲಿದೆ ಎನ್ನಲಾಗಿದೆ. ಅರ್ಜುನ್‌ ಹಾಗೂ ಸಾನ್ಯಾರ ವಿವಾಹ ನಿಶ್ಚಿತಾರ್ಥ ಕಳೆದ ವರ್ಷ ಆಗಸ್ಟ್‌ನಲ್ಲಿ ನೆರವೇರಿತ್ತು. ಕೇವಲ ಆಪ್ತ ಬಳಗವಷ್ಟೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು.

ಸಾನ್ಯಾ ಚಂದೋಕ್‌ ಪಶು ವೈದ್ಯಕೀಯ ಕೋರ್ಸ್‌ ಪೂರ್ತಿಗೊಳಿಸಿ, ವೃತ್ತಿಪರ ತರಬೇತಿ ಪಡೆಯುತ್ತಿದ್ದಾರೆ. ಸಾನ್ಯಾರ ಮುತ್ತಾತ ಐ.ಕೆ.ಘೈ, ಭಾರತದ ಖ್ಯಾತ ಐಸ್‌ಕ್ರೀಂ ಬ್ರ್ಯಾಂಡ್‌ ಆದ ಕ್ವಾಲಿಟಿ ಐಸ್‌ಕ್ರೀಂನ ಸಂಸ್ಥಾಪಕರು. ಮುಂಬೈನ ಮರೀನ್‌ ಡ್ರೈವ್‌ನಲ್ಲಿರುವ ಇಂಟರ್‌ ಕಾಂಟಿನೆಂಟಲ್‌ ಹೋಟೆಲ್‌ ಸಹ ಇವರೇ ಆರಂಭಿಸಿದ್ದು. ಸಾನ್ಯಾರ ಕುಟುಂಬ ಗ್ರಾವಿಸ್‌ ಗ್ರೂಪ್‌ ಎನ್ನುವ ಸಂಸ್ಥೆ ನಡೆಸುತ್ತಿದ್ದು, ಹಲವು ದೇಶಗಳಲ್ಲಿ ಈ ಸಂಸ್ಥೆಯು ಹೋಟೆಲ್‌ಗಳನ್ನು ಹೊಂದಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!