ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಐದು ಗ್ಯಾರೆಂಟಿಗಳ ಪೈಕಿ ನಾಲ್ಕನೇ ಗ್ಯಾರೆಂಟಿ ಜಾರಿಗೆ ಕೌಂಟ್‌ಡೌನ್ ಶುರುವಾಗಿದೆ.
ಓದಿಕೊಂಡು ಕೆಲಸ ಸಿಗದೇ ಕಷ್ಟಪಡುವ ಯುವಪೀಳಿಗೆಗೆ ಸಹಾಯವಾಗಲೆಂದು ಕೈ ಸರ್ಕಾರ ಯುವನಿಧಿ ಗ್ಯಾರೆಂಟಿ ಜಾರಿಗೆ ಮುಂದಾಗಿದ್ದು, 2024ರ ಜನವರಿ 12ರಂದು ರಾಜ್ಯಾಂದ್ಯಂತ ಯೋಜನೆ ಜಾರಿಯಾಗಲಿದೆ.
ಈ ಬಗ್ಗೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾಹಿತಿ ನೀಡಿದ್ದು, ಜ.12ರಂದು ವಿವೇಕಾನಂದ ಜಯಂತಿ. ಈ ದಿನದಂದು ನಮ್ಮ ಯುವನಿಧಿ ಯೋಜನೆ ಜಾರಿಮಾಡುತ್ತೇವೆ. ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ ಮೂಲಕ ಹಣ ನೀಡಲಾಗುತ್ತದೆ. ಶಿವಮೊಗ್ಗದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಯುವನಿಧಿ ಯೋಜನೆಯ ಲಾಭ ಪಡೆಯುವ ನಿರುದ್ಯೋಗಿಗೆ ಕೆಲಸ ಸಿಕ್ಕಾಕ್ಷಣದಿಂದ ಯುವನಿಧಿ ನಿಲ್ಲಿಸಲಾಗುತ್ತದೆ, ಇನ್ನು ಕೆಲಸ ಸಿಕ್ಕಿದ ವಿಷಯ ಮುಚ್ಚಿಟ್ಟು ಹಣ ಪಡೆಯುವವರಿಂದ, ಯುವನಿಧಿ ಹಣವನ್ನು ವಾಪಾಸ್ ಪಡೆಯಲಾಗುತ್ತದೆ ಜೊತೆಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಪ್ರತೀ ತಿಂಗಳು 25 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಡಿಗ್ರಿಯನ್ನು ಕರ್ನಾಟಕದಲ್ಲಿ ಓದಿದವರಿಗೆ ಮಾತ್ರ ಯುವನಿಧಿ ಪಡೆಯಲು ಅವಕಾಶ ಎಂದಿದ್ದಾರೆ.