May 10, 2026
Sunday, May 10, 2026
spot_img

ಮದುವೆಯಾಗಿ ಬಂದಿದ್ದೀಯ ಸ್ವಲ್ಪವಾದ್ರೂ ಅಡುಗೆ ಕಲಿ ಅಂದಿದ್ದಕ್ಕೆ ಸೊಸೆ ಆತ್ಮಹತ್ಯೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬರೀ 18 ವರ್ಷಕ್ಕೆ ಮದುವೆಯಾಗಿ ಹೋದ ಯುವತಿಯೊಬ್ಬಳು ಅತ್ತೆಯ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಪೆರೇಸಂದ್ರ ಗ್ರಾಮದ ಶ್ರುತಿ (18) ಮೃತರು. ಅತ್ತೆ ಮನೆಯಲ್ಲಿ ಇದ್ದ ಶ್ರುತಿಗೆ ಅವರು ಅಡುಗೆ ಮಾಡು, ನನಗೂ ಕೆಲಸದಲ್ಲಿ ಸ್ವಲ್ಪ ಸಹಾಯ ಆಗುತ್ತದೆ. ಅತ್ತೆ ಮನೆಯಲ್ಲಿ ಯಾರು ಸುಮ್ಮನೆ ಕೂರುತ್ತಾರೆ. ಅಡುಗೆ ಕಲಿ ಎಂದಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಅತ್ತೆಯ ಮಾತನ್ನು ತುಂಬಾ ಮನಸ್ಸಿಗೆ ತೆಗೆದುಕೊಂಡು, ಮನೆಯಲ್ಲಿದ್ದ ವಿಷಸೇವನೆ ಮಾಡಿದ್ದಾಳೆ. ತಕ್ಷಣ ಶೃತಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !