ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ವಿವಾಹಿತನೊಂದಿಗಿನ ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
46 ವರ್ಷದ ಶಕುಂತಲಾದೇವಿ ಹಾಗೂ ಅವರ 19 ವರ್ಷದ ಪುತ್ರಿ ಪ್ರಿಯಾಂಕಾ ಮೃತಪಟ್ಟ ದುರ್ದೈವಿಗಳು.
ಮೃತ ಪ್ರಿಯಾಂಕಾ ಅದೇ ಗ್ರಾಮದ 34 ವರ್ಷದ ಮುತ್ತುರಾಜ್ ಎಂಬಾತನ ಪ್ರೇಮಪಾಶಕ್ಕೆ ಬಿದ್ದಿದ್ದಳು. ಮುತ್ತುರಾಜ್‌ಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ, ಆತ ಪ್ರಿಯಾಂಕಾಳನ್ನು ಪ್ರೀತಿಸುವ ನಾಟಕವಾಡುತ್ತಿದ್ದ ಎನ್ನಲಾಗಿದೆ. ದಿನನಿತ್ಯ ಮನೆಗೆ ಬರುತ್ತಿದ್ದ ಈತನ ವರ್ತನೆಯನ್ನು ಸಾಮಾನ್ಯ ಗೆಳೆತನವೆಂದು ಭಾವಿಸಿದ್ದ ಪೋಷಕರಿಗೆ, ಇತ್ತೀಚೆಗೆ ಇವರಿಬ್ಬರ ನಡುವಿನ ಅಕ್ರಮ ಸಂಬಂಧದ ವಿಷಯ ತಿಳಿದು ಬಂದಿತ್ತು.
ಮಗಳಿಗೆ ಸಂಬಂಧಿಕರಲ್ಲೇ ಹುಡುಗನನ್ನು ನೋಡಿ ಮದುವೆ ಮಾಡಲು ಪೋಷಕರು ಸಿದ್ಧತೆ ನಡೆಸಿದ್ದರು. ಆದರೆ ಮಗಳು ವಿವಾಹಿತನ ಜೊತೆ ಸಂಬಂಧ ಇಟ್ಟುಕೊಂಡಿರುವುದು ತಾಯಿ ಶಕುಂತಲಾದೇವಿಗೆ ತೀವ್ರ ಆಘಾತ ನೀಡಿತ್ತು. ಮಗಳಿಗೆ ಬುದ್ಧಿ ಹೇಳಿದರೂ ಪ್ರಯೋಜನವಾಗದಿದ್ದಾಗ ಮತ್ತು ಮುತ್ತುರಾಜ್‌ನ ಪೀಡನೆ ಹೆಚ್ಚಾದಾಗ, ಸಮಾಜದಲ್ಲಿ ಮರ್ಯಾದೆ ಹೋಗಬಹುದೆಂಬ ಭೀತಿಯಿಂದ ತಾಯಿ-ಮಗಳಿಬ್ಬರೂ ಸಾವಿನ ಹಾದಿ ಹಿಡಿದಿದ್ದಾರೆ.
ಇದನ್ನೂ ಓದಿ:
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುತ್ತುರಾಜ್ ವಿರುದ್ಧ ತನಿಖೆ ಕೈಗೆತ್ತಿಕೊಂಡಿದ್ದಾರೆ.



