ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಡೇವಿಡ್ ವಾರ್ನರ್ ಈ ವರ್ಷ ಐಪಿಎಲ್ (IPL)ನ ಯಾವುದೇ ತಂಡದಲ್ಲಿ ಆಡ್ತಿಲ್ಲ. ಟಿ20 ಲೀಗ್‌ನ ಅತ್ಯಂತ ಸ್ಫೋಟಕ ಆಟಗಾರನಾಗಿದ್ದ ಡೇವಿಡ್ ವಾರ್ನರ್ ಈ ಋತುವಿನಲ್ಲಿ ಮಾರಾಟವಾಗದೆ ಉಳಿದುಬಿಟ್ಟಿದ್ದಾರೆ. 2 ಕೋಟಿ ಮೂಲ ಬೆಲೆ ಹೊಂದಿದ್ದ ವಾರ್ನರ್ ರನ್ನು ಯಾವುದೇ ತಂಡ ಖರೀದಿಸಲು ಆಸಕ್ತಿ ತೋರಿರಲಿಲ್ಲ.
ಆದ್ರೆ ಐಪಿಎಲ್ ಮುಗಿಯುವ ಮುನ್ನವೇ ಅದಕ್ಕಿಂತ ದೊಡ್ಡ ಮೊತ್ತವನ್ನು ಸಂಪಾದನೆ ಮಾಡಿದ್ದಾರೆ. ಡೆವಿಡ್ ವಾರ್ನರ್ ಒಂದೇ ಒಂದು ಸಿನಿಮಾ ಮಾಡಿ, ಐಪಿಎಲ್ ಬೇಸ್ ಮೊತ್ತಕ್ಕಿಂತ ಹೆಚ್ಚು ಹಣವನ್ನು ಸಂಪಾದನೆ ಮಾಡಿದ್ದಾರೆ.
ಡೇವಿಡ್ ವಾರ್ನರ್ ತೆಲುಗಿನ ರಾಬಿನ್ ಹುಡ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಬಿನ್ ಹುಡ್ ಚಿತ್ರ ಮಾರ್ಚ್ 28 ರಂದು ತೆರೆಗೆ ಬಂದಿದೆ. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗ್ತಾ ಇದ್ದು, ಈ ಚಿತ್ರದಲ್ಲಿ ಅಭಿನಯಿಸಲು ಡೇವಿಡ್ ವಾರ್ನರ್ ಬರೋಬ್ಬರಿ 3 ಕೋಟಿ ಸಂಭಾವನೆ ಪಡೆದಿದ್ದಾರೆ.