March 27, 2026
Friday, March 27, 2026
spot_img

ಚಿಕ್ಕಬಳ್ಳಾಪುರದಲ್ಲಿ ಅಕ್ರಮ ಗ್ಯಾಸ್ ಅಡ್ಡೆ ಮೇಲೆ ಡಿಸಿ ದಾಳಿ: 247 ಸಿಲಿಂಡರ್‌ಗಳು ಜಪ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ (ಹೋಟೆಲ್, ಅಂಗಡಿ ಇತ್ಯಾದಿ) ಬಳಸುತ್ತಿದ್ದ ಅಡ್ಡೆಗಳ ಮೇಲೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಜಿಲ್ಲಾಧಿಕಾರಿ ಜಿ. ಪ್ರಭು ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಒಟ್ಟು 247 ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ.

ಜಿಲ್ಲೆಯಾದ್ಯಂತ ಜಪ್ತಿಯಾದ ವಿವರ:

ಬಾಗೇಪಲ್ಲಿ: 13

ಚಿಕ್ಕಬಳ್ಳಾಪುರ: 71

ಚಿಂತಾಮಣಿ: 26

ಗೌರಿಬಿದನೂರು: 36

ಗುಡಿಬಂಡೆ: 68

ಶಿಡ್ಲಘಟ್ಟ: 31

ಚೇಳೂರು: 02

ಒಟ್ಟು ಜಪ್ತಿಯಾದವುಗಳಲ್ಲಿ 214 ಗೃಹಬಳಕೆಯ ಸಿಲಿಂಡರ್‌ಗಳಿದ್ದರೆ, ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ 33 ವಾಣಿಜ್ಯ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. “ಇನ್ಮುಂದೆ ಇಂತಹ ಕೃತ್ಯವೆಸಗಿದರೆ ಸಿಲಿಂಡರ್ ಮಂಜೂರಾತಿಯನ್ನೇ ಶಾಶ್ವತವಾಗಿ ರದ್ದು ಮಾಡಲಾಗುವುದು” ಎಂದು ಜಿಲ್ಲಾಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !