August 24, 2026
Monday, August 24, 2026
spot_img

Gold Rate | ಹಳದಿ ಲೋಹದ ಬೆಲೆಯಲ್ಲಿ ಅಸ್ಥಿರತೆ: ಗ್ರಾಹಕರಲ್ಲಿ ಗೊಂದಲ ಮೂಡಿಸಿದ ಏರಿಳಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಷೇರು ಮಾರುಕಟ್ಟೆಯ ಏರಿಳಿತದಂತೆ ಚಿನ್ನದ ಬೆಲೆಯೂ ಈಗ ಗ್ರಾಹಕರನ್ನು ಕಣ್ಣಾಮುಚ್ಚಾಲೆ ಆಡಿಸುತ್ತಿದೆ. ಗುರುವಾರ ಒಂದೇ ದಿನ ಬೆಲೆಯಲ್ಲಿ ಭಾರೀ ಏರಿಳಿತ ಕಂಡಿದ್ದ ಹಳದಿ ಲೋಹ, ಇಂದು ಶುಕ್ರವಾರ ಅಲ್ಪ ಪ್ರಮಾಣದ ಏರಿಕೆಯನ್ನು ಕಂಡಿದೆ.

ಗುರುವಾರ ಬೆಳಿಗ್ಗೆ ಪ್ರತಿ ಗ್ರಾಮ್‌ಗೆ 13,465 ರೂ. ತಲುಪಿದ್ದ ಆಭರಣ ಚಿನ್ನದ ಬೆಲೆ, ಸಂಜೆಯ ವೇಳೆಗೆ 13,250 ರೂ. ಗೆ ಕುಸಿದಿತ್ತು. ಆದರೆ ಇಂದು ಮತ್ತೆ ಪ್ರತಿ ಗ್ರಾಮ್‌ಗೆ 15 ರೂ. ಏರಿಕೆ ಕಾಣುವ ಮೂಲಕ ಸ್ಥಿರತೆಯತ್ತ ಮುಖ ಮಾಡಿದೆ. ಇನ್ನು ಬೆಳ್ಳಿ ಪ್ರಿಯರಿಗೆ ಸ್ವಲ್ಪ ನಿರಾಳವೆನಿಸುವಂತೆ, ಇಂದು ಬೆಳ್ಳಿ ದರದಲ್ಲಿ ಪ್ರತಿ ಕೆಜಿಗೆ ಅಂದಾಜು 10-15 ರೂ. ಗಳಷ್ಟು ಕುಸಿತ ಕಂಡುಬಂದಿದೆ.

ಲೋಹದ ವಿಧಇಂದಿನ ದರ (ಬೆಂಗಳೂರು)
22 ಕ್ಯಾರಟ್ ಆಭರಣ ಚಿನ್ನ₹ 1,32,650
24 ಕ್ಯಾರಟ್ ಅಪರಂಜಿ ಚಿನ್ನ₹ 1,44,710
ಬೆಳ್ಳಿ (100 ಗ್ರಾಮ್)₹ 24,000

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !