ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಪ್ರಾರಂಭವಾಗಿದೆ. ಶಾಲಾರಂಭದ ಮೊದಲ ದಿನವೇ ಸೂಟು ಬೂಟು ತೊಟ್ಟು ಡಿಸಿಎಂ ಡಿಕೆ ಶಿವಕುಮಾರ್ ತಾವು ಓದಿದ ಶಾಲೆಗೆ ಭೇಟಿ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಇಂದು ಬೆಳಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ತಾವು ಓದಿದ್ದ ಬೆಂಗಳೂರಿನ ರಾಜಾಜಿನಗರದ ಎನ್ಪಿಎಸ್ ಶಾಲೆಗೆ ಸೌಹಾರ್ದವಾಗಿ ಭೇಟಿ ನೀಡಿದರು. ಇದೇ ವೇಳೆ ಎನ್ಪಿಎಸ್ ಶಾಲೆ ಸಂಸ್ಥಾಪಕ ಅಧ್ಯಕ್ಷ ಗೋಪಾಲಕೃಷ್ಣ ಜೊತೆಗೆ ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, ನಾನು ಪ್ರೈಮರಿ ಶಾಲೆ ಓದಿದ್ದು ಇಲ್ಲೇ. ಭಾರತಕ್ಕೆ ಮೊದಲ ಅಟಾನಾಮಸ್ ಶಾಲೆ ಇದು. ದೊಡ್ಡ ಬೆಂಚ್ ಮಾರ್ಕ್ ಸ್ಥಾಪನೆ ಮಾಡಿದ ಶಾಲೆ ಇದು. ನನ್ನ ಮಕ್ಕಳು ಓದಿದ್ದು ಕೂಡ ಇದೇ ಶಾಲೆಯಲ್ಲಿ. ಈ ಶಾಲೆ ಬೆಲೆ ಏನು ಅಂತ ನನಗೆ ಗೊತ್ತಿದೆ ಎಂದು ತಾವು ವ್ಯಾಸಾಂಗ ಮಾಡಿದ ಶಾಲೆ ಬಗ್ಗೆ ಕೊಂಡಾಡಿದರು.
ನಮ್ಮ ಪ್ರಣಾಳಿಕೆಯಲ್ಲಿ ಪಂಚಾಯತಿ ಮಟ್ಟದಲ್ಲಿ ನವೋದಯ ಶಾಲೆ ಮಾದರಿಯಲ್ಲಿ ಶಾಲೆ ಸ್ಥಾಪನೆಗೆ ಭಾಷೆ ಕೊಟ್ಟಿದ್ದೇವೆ. ಇದನ್ನ ಯಾವ ರೀತಿ ಮಾಡಬೇಕು ಎಂದು ಗೋಪಾಲಕೃಷ್ಣ ಅವರ ಬಳಿ ಸಲಹೆ ಕೇಳಿದ್ದೇನೆ. ನಾನು ಪರಮೇಶ್ವರ್, ಹೊಸ ಎಜುಕೇಶನ್ ಮಿನಿಸ್ಟರ್ ಇದರ ಬಗ್ಗೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಶಿಕ್ಷಣದ ಸಲುವಾಗಿ ವಲಸೆ ಬರುವ ಮಕ್ಕಳು ಜಾಸ್ತಿ ಇದ್ದಾರೆ. ಹೀಗಾಗಿ ಪಂಚಾಯಿತಿ ಮಟ್ಟದಲ್ಲಿ ಹಳ್ಳಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದು ನಮ್ಮ ಧ್ಯೇಯ. ರೈತರ ಮಕ್ಕಳಿಗೆ ಕ್ವಾಲಿಟಿ ಎಜುಕೇಶನ್ ಕೊಡುವುದು ನಮ್ಮ ಕನಸು. ಇದನ್ನ ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ ಎಂದು ಹೇಳಿದರು.
ಬೆಂಗಳೂರಿಗೆ ಹೊಸ ರೂಪ ಕೊಡೋ ಯೋಚನೆ ಇದೆ. ಉತ್ತಮ ಶಿಕ್ಷಣ ಕೊಡುವುದು ನಮ್ಮ ಧ್ಯೇಯ. ನಮ್ಮ ಬಳಿ ಐಡಿಯಾಗಳು ಇವೆ. 20 ವರ್ಷದ ಕನಸು ನಮ್ಮ ಪ್ರಣಾಳಿಕೆ ಇಟ್ಡಿದ್ದೇವೆ. ಅದನ್ನ ಸಾಕಾರಾ ಮಾಡೋ ರೀತಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.