ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಸಿಎಂ ಡಿ.ಕೆ ಶಿವಕುಮಾರ್ ಅವರು ತಮ್ಮ ಪತ್ನಿ ಜೊತೆ ಘಾಟಿ ಸುಬ್ರಮಣ್ಯ ಸ್ವಾಮಿಯ ದರುಶನ ಪಡೆದು, ವಿಶೇಷ ಪೂಜೆ ಹಾಗೂ ಅಭಿಷೇಕದಲ್ಲಿ ಭಾಗಿಯಾಗಿದ್ದಾರೆ.
ದೇವರ ದರ್ಶನದ ಬಳಿಕ ಮಾತನಾಡಿದ ಡಿಕೆಶಿ, ನನ್ನ ಪ್ರಾರ್ಥನೆಗೆ ಫಲ ಸಿಕ್ಕಿದೆ. ಹಾಗಾಗಿ ಘಾಟಿ ದೇವರ ದರ್ಶನಕ್ಕೆ ಆಗಮಿಸಿದ್ದೇನೆ. ನಾನು ಸಹ 30 ವರ್ಷದ ಹಿಂದೆ ಇಲ್ಲಿ ಸರ್ಪ ಸಂಸ್ಕಾರ ಮಾಡಿಸಿದ್ದೇನೆ. ದೇವಾಲಯದ ಅಭಿವೃದ್ಧಿಯನ್ನು ಕೆ.ಎಚ್ ಮುನಿಯಪ್ಪ ಮುಂದಾಳತ್ವದಲ್ಲಿ ಮಾಡಲಿದ್ದೇವೆ ಎಂದು ಈ ಮೂಲಕ ತಿಳಿಸಿದ್ದಾರೆ.