ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡನೇ ದಿನ ಡಿಸಿ, ಸಿಇಓಗಳ ಸಭೆ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ , ಶನಿವಾರ ಡಿಸಿಎಂ ಮತ್ತು ಸಚಿವರ ಮೇಲೆ ಗರಂ ಆದರು. ಟೈಮ್‌ಸೆನ್ಸ್ ಇಲ್ಲದೆ ಹೋದರೆ ಹೇಗೆ ಎಂದು ಸಿಎಂ ಸಿಟ್ಟಿನಲ್ಲಿ ಮಾತನಾಡಿದ್ದಾರೆ.
ಸಭೆಗೆ ಸರಿಯಾದ ಸಮಯಕ್ಕೆ ಬಾರದ ಸಚಿವರು ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಮೇಲೆ ಅಸಮಾಧಾನ ಹೊರ ಹಾಕಿದ ಘಟನೆ ನಡೆದಿದೆ. ಎರಡನೇ ದಿನ ಅಂದರೆ ಇಂದು ಸಭೆ ಪ್ರಾರಂಭಕ್ಕೂ ಮುನ್ನ ಅಧಿಕಾರಿಗಳು ಸಚಿವರನ್ನ ಸ್ವಾಗತ ಮಾಡ್ತಿದ್ದರು.
ಈ ವೇಳೆ ಹಲವು ಸಚಿವರು ಸಭೆಗೆ ಇನ್ನು ಆಗಮಿಸಿರಲಿಲ್ಲ. ಇದಕ್ಕೆ ಸಿಟ್ಟಾದ ಸಿಎಂ, ಯಾರ‍್ಯಾರು ಸಭೆಗೆ ಬಂದಿಲ್ಲವೋ ಅವರ ಹೆಸರು ಗುರುತು ಹಾಕಿಕೊಳ್ತೇನೆ ಎಂದರು. ಇದಕ್ಕೆ ಸಚಿವ ಕೃಷ್ಣ ಭೈರೇಗೌಡರು, ನೀವೇನು ದಂಡ ಹಾಕೋದಿಲ್ಲ ಅಲ್ವಾ, ಬಿಡಿ ಸರ್ ಎಂದು ಹೇಳಿದರು.