ಹೊಸದಿಗಂತ ವರದಿ, ಹಾವೇರಿ:
ನಿವೃತ್ತ ಶಿಕ್ಷಕನ ನಿವೃತ್ತ ವೇತನದ ಫೈಲನ್ನು ಎ.ಜಿ ಆಫೀಸಿಗೆ ಕಳಿಸಲು ಲಂಚಕ್ಕೆ ಬೇಡಿಕೆ ಇಟ್ಟಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನಪ್ಪ ವಡಗೇರಿ ಹಾಗೂ ದ್ವಿ.ದ ಸಕಾಯಕ ದತ್ತಾತ್ರೇಯ ಕುಂಟೆ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯ ನಿವೃತ್ತ ಶಿಕ್ಷಕ ಮೊಹಮ್ಮದ ಜಾಫರ್ ಲೋದಿ ಎನ್ನುವವರ ನಿವೃತ್ತಿ ವೇತನದ ಫೈಲನ್ನು ಎ.ಜಿ ಕಚೇರಿಗೆ ಕಳಿಸುವುದಕ್ಕೆ ಹಣದ ಬೇಡಿಕೆಯನ್ನು ಇಟ್ಟಿದ್ದರು. ಶುಕ್ರವಾರ ನಿವೃತ್ತ ಶಿಕ್ಷಕನಿಂದ ೭ ಸಾವಿರ ಲಂಚದ ಹಣವನ್ನು ಪಡೆಯುವ ಸಂದರ್ಭದಲ್ಲಿ ಡಿಡಿಪಿಐ ಹಾಗೂ ಎಸ್‌ಡಿಎ ಲೋಕಾಯುಕ್ತ ದಾಳಿ ನಡೆಸಿದ ಸಂದರ್ಭದಲ್ಲಿ ಇವರು ಬಲೆಗೆ ಬಿದ್ದಿದ್ದಾರೆ.