ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾ ತಂಡ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 213 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ. ಓಪನರ್ ಕ್ವಿಂಟನ್ ಡಿಕಾಕ್ 90 ರನ್ಗಳಿಸಿದ ದಕ್ಷಿಣ ಆಫ್ರಿಕಾದ ಬೃಹತ್ ಮೊತ್ತಕ್ಕೆ ಕಾರಣರಾದರು. ನಾಯಕ ಐಡೆನ್ ಮಾರ್ಕ್ರಮ್ 29ರನ್, ಫೆರೈರಾ ಅಜೇಯ 30 ರನ್ಗಳಿಸಿ ಡಿಕಾಕ್ಗೆ ಸಾಥ್ ನೀಡಿದರು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಹರಿಣ ಪಡೆ ಮೊದಲ ವಿಕೆಟ್ ಜೊತೆಯಾಟದಲ್ಲಿ 38 ರನ್ ಸೇರಿಸಿತು. ಆರಂಭಿಕನಾಗಿ ಅವಕಾಶ ಪಡೆದಿದ್ದ ರೀಝಾ ಹೆನ್ರಿಕ್ಸ್ ಕೇವಲ 8 ರನ್ಗಳಿಸಿ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರು. ನಂತರ 2ನೇ ವಿಕೆಟ್ಗೆ ಡಿಕಾಕ್ ಜೊತೆ ಸೇರಿದ ನಾಯಕ ಐಡೆನ್ ಮಾರ್ಕ್ರಮ್ 47 ಎಸೆತಗಳಲ್ಲಿ 83 ರನ್ಸ್ ಸೇರಿಸಿದರು.
ಮಾರ್ಕ್ರಮ್ ಕೂಡ 26 ಎಸೆತಗಳಲ್ಲಿ 29 ರನ್ ನೀಡಿ ವರುಣ್ ಚಕ್ರವರ್ತಿಗೆ 2ನೇ ಬಲಿಯಾದರು. ಆದರೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಕ್ವಿಂಟನ್ ಡಿಕಾಕ್ 46 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್ಗಳ ನೆರವಿನಿಂದ 90 ರನ್ ಸಿಡಿಸಿದರು.
ಒಂದು ಹಂತದಲ್ಲಿ 15 ಓವರ್ಗಳಿಗೆ 156 ರನ್ಗಳಿಸಿದ್ದ ಹರಿಣ ಪಡೆ ಸತತ 2 ವಿಕೆಟ್ ಕಳೆದುಕೊಂಡಿತು. ಡಿಕಾಕ್ ವಿಕೆಟ್ ಬೆನ್ನಲ್ಲೇ ಒತ್ತಡದಲ್ಲಿ ಬ್ಯಾಟ್ ಮಾಡಿದ ಡೆವಾಲ್ಡ್ ಬ್ರೆವಿಸ್ 10 ಎಸೆತಗಳಲ್ಲಿ ತಲಾ 1 ಬೌಂಡರಿ, 1 ಸಿಕ್ಸರ್ ಸೇರಿದಂತೆ 14 ರನ್ಗಳಿಸಿ ಔಟ್ ಆದರು. ಆದರೆ ಕೊನೆಯ 3 ಓವರ್ಗಳಲ್ಲಿ ಅಬ್ಬರಿಸಿದ ಅನುಭವಿಗಳಾದ ಡೇವಿಡ್ ಮಿಲ್ಲರ್ ಹಾಗೂ ಡೊನೊವನ್ ಫೆರೈರಾ 23 ಎಸೆತಗಳಲ್ಲಿ 53 ರನ್ಗಳ ಜೊತೆಯಾಟ ನಡೆಸಿ ತಂಡದ ಮೊತ್ತವನ್ನ 200ರ ಗಡಿ ದಾಟಿಸಿದರು.
ಫೆರೈರಾ ಕೇವಲ 16 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ಗಳ ನೆರವಿನಿಂದ ಅಜೇಯ 30 ರನ್ಗಳಿಸಿದರೆ, ಮಿಲ್ಲರ್ 12 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 20 ರನ್ಗಳಿಸಿದರು. ಕೊನೆಯ 3 ಓವರ್ಗಳಲ್ಲಿ ಈ ಜೋಡಿ 49 ರನ್ ಸೇರಿಸಿತು.

