ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಚೂರಿನ ದೇವದುರ್ಗದ ಖಾನಾಪೂರದಲ್ಲಿ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಮಂಗಗಳ ಮೃತದೇಹ ಪತ್ತೆಯಾಗಿದೆ.
ಮಂಗಗಳು ಟ್ಯಾಂಕ್ ಒಳಗೆ ಬಿದ್ದು ಮೃತಪಟ್ಟಿದ್ದು, ಮೂರು ದಿನಗಳಾದರೂ ಮಂಗಗಳ ಕಳೇಬರ ನೀರಿನಲ್ಲಿಯೇ ಇತ್ತು. ಇದನ್ನು ಅರಿಯದ ಜನ ಇದೇ ನೀರನ್ನು ಕುಡಿದು ಅಸ್ವಸ್ಥರಾಗಿದ್ದಾರೆ.
ಇಡೀ ಊರಿಗೆ ಇದೊಂದು ಕುಡಿಯುವ ನೀರಿನ ಸರಬರಾಜು ಇದ್ದು, ಇದು ತೆರೆದ ವಾಟರ್ ಟ್ಯಾಂಕ್ ಆಗಿದೆ. ನೀರು ಕುಡಿಯಲು ಹೋಗಿ ಮಂಗಗಳು ನೀರಿಗೆ ಬಿದ್ದು ಮೃತಪಟ್ಟಿವೆ. ಗ್ರಾಮದಲ್ಲಿ ಅಸ್ವಸ್ಥರಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಊರಿನ ಹಲವರಲ್ಲಿ ವಾಂತಿ ಬೇಧಿ ಕಾಣಿಸಿಕೊಂಡಿದ್ದು, ಜನ ಪಂಚಾಯತಿ ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.