ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಮಳೆಯಿಂದ ಇಥಿಯೋಪಿಯಾದ ವಿವಿಧ ಭಾಗದಲ್ಲಿ ಭೂ ಕುಸಿತ ಉಂಟಾಗಿದ್ದು, 157 ಜನರು ಸಾವನ್ನಪ್ಪಿದ್ದಾರೆ.
ಇನ್ನು ಹಲವು ಜನರು ಮಣ್ಣಿನ ಅಡಿಯಲ್ಲಿ ಸಿಲುಕಿದ್ದು, ರಕ್ಷಿಸಲು ಪ್ರಯತ್ನಿಸಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಇಥಿಯೋಪಿಯಾದ ಕೆಂಚೋ ಶಾಚಾ ಗೊಜ್ಡಿ ಜಿಲ್ಲೆಯಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಸೋಮವಾರ ತಡರಾತ್ರಿ 55 ಜನ ಮೃತಪಟ್ಟಿದ್ದರು. ಇಂದು ಆ ಸಾವಿನ ಸಂಖ್ಯೆ 157ಕ್ಕೆ ಏರಿದೆ. ಇನ್ನೂ ಮಣ್ಣಿನ ಅಡಿಯಲ್ಲಿ ಹಲವು ಜನರು ಸಿಲುಕಿರುವ ಸಾಧ್ಯತೆಯಿದೆ. ಆದರೆ, ಅವರು ಬದುಕುಳಿದಿರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ರಕ್ಷಿಸಲು ಪ್ರಯತ್ನಿಸುವಾಗ ಮಣ್ಣಿನಿಂದ ಆವೃತವಾದ ಗುಂಪಿನಲ್ಲಿ ಅನೇಕ ಜನರು ಪತ್ತೆಯಾಗಿಲ್ಲ ಎಂದು ಗೋಫಾದಲ್ಲಿನ ಅಧಿಕಾರಿ ಮಾರ್ಕೋಸ್ ಮೆಲೆಸೆ ಹೇಳಿದ್ದಾರೆ. ನಾಪತ್ತೆಯಾದವರಿಗಾಗಿ ನಾವು ಇನ್ನೂ ಹುಡುಕಾಟ ನಡೆಸುತ್ತಿದ್ದೇವೆ ಎಂದು ಗೋಫಾ ವಲಯದ ವಿಪತ್ತು ಪ್ರತಿಕ್ರಿಯೆ ಸಂಸ್ಥೆಯ ನಿರ್ದೇಶಕ ಮೆಲೆಸೆ ಹೇಳಿದ್ದಾರೆ.
ಗೋಫಾ ರಾಜಧಾನಿ ಅಡಿಸ್ ಅಬಾಬಾದಿಂದ 320 ಕಿ.ಮೀ ದೂರದಲ್ಲಿದೆ.