ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವೊಂದು ಸುದ್ದಿಗಳನ್ನು ಕೇಳಿದಾಗ, ಸಾವು ಹೇಗಾದರೂ ಬರಬಹುದು, ಭೂಮಿ ಮೇಲಿನ ಸಮಯ ಮುಗಿದ ಮೇಲೆ ಅದನ್ನು ತಪ್ಪಿಸಿಕೊಳ್ಳೋದಕ್ಕೆ ಯಾರಿಂದಲೂ ಸಾಧ್ಯವೇ ಇಲ್ಲ ಎನಿಸುತ್ತದೆ.
ಇದಕ್ಕೆ ನಿದರ್ಶನ ಎನ್ನುವಂತೆ ರಾಜಸ್ಥಾನದಲ್ಲಿ ಮೂತ್ರ ವಿಸರ್ಜನೆಗೆ ನಿಂತಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದಕ್ಕೆ ಕಾರಣ ವಂದೇ ಭಾರತ್ ರೈಲು, ಹೌದು, ರಾಜಸ್ಥಾನದಲ್ಲಿ ವಂದೇ ಭಾರತ್ ರೈಲು ಹಸುವಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹಳಿಯಿಂದ ಸ್ವಲ್ಪವೇ ದೂರದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಇಬ್ಬರ ಮೇಲೆ ಹಸು ಬಂದು ಬಿದ್ದಿದೆ.
ಶಿವದಯಾಳ್ ಶರ್ಮಾ ಎನ್ನುವವರು ಹಳಿಯಿಂದ 30ಮೀಟರ್ ದೂರದಲ್ಲಿ ನಿಂತು ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಈ ವೇಳೆ ರೈಲಿಗೆ ಹಸು ಅಡ್ಡ ಬಂದಿದ್ದು, ಹಸುವಿನ ದೇಹದ ಅರ್ಧ ಭಾಗ ಶಿವದಯಾಳ್‌ಗೆ ಬಂದು ತಗುಲಿದೆ. ಇದರಿಂದಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.