ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿರುವ ಮಾದಾಪುರ ದೇವಸ್ಥಾನದ ಮಾದಾಪುರಂ ಅಜಿತ್ ಕುಮಾರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥನ ತಾಯಿಗೆ ತಮಿಳುನಾಡು ಸಿಎಂ MK ಸ್ಟಾಲಿನ್ ಕ್ಷಮೆ ಕೋರಿದ್ದಾರೆ.
ತಮಿಳುನಾಡಿನ ಶಿವಗಂಗಾದಲ್ಲಿ 29 ವರ್ಷದ ವ್ಯಕ್ತಿಯ ಕಸ್ಟಡಿ ಸಾವು ಸಮರ್ಥನೀಯವಲ್ಲ’ ಮತ್ತು ಯಾರಿಗೂ ಅಂತಹ ಗತಿ ಬರಬಾರದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮಂಗಳವಾರ ಹೇಳಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಸ್ಟಾಲಿನ್, ‘ಸರ್ಕಾರ ಸಂತ್ರಸ್ತ ಕುಟುಂಬದ ಬೆಂಬಲಕ್ಕೆ ನಿಲ್ಲುತ್ತದೆ. ಮೃತ ಅಜಿತ್‌ಕುಮಾರ್ ಅವರ ತಾಯಿಯೊಂದಿಗೆ ದೂರವಾಣಿ ಸಂಭಾಷಣೆಯಲ್ಲಿ, ಸ್ಟಾಲಿನ್ ಕುಟುಂಬಸ್ಥರನ್ನು ಧೈರ್ಯವಾಗಿರುವಂತೆ ಕೇಳಿಕೊಂಡರು. ನನಗೆ ತುಂಬಾ ವಿಷಾದವಿದೆ, ಕ್ರಮ ಕೈಗೊಳ್ಳಲು ಅಧಿಕಾರಿಗಳು ಕೇಳಿದ್ದೇನೆ. ಗಂಭೀರ ಕ್ರಮ ಕೈಗೊಳ್ಳಿ. ಸದೃಢವಾಗಿರಿ ಎಂದು ಸ್ಟಾಲಿನ್ ಹೇಳಿದರು.
ಸಂತ್ರಸ್ಥನ ಸಹೋದರನೊಂದಿಗೆ ಮಾತನಾಡುವಾಗ, ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ . ಅಂತೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಪೊಲೀಸರ ಬಂಧಿಸಲಾಗಿದ್ದು, ಡಿಎಸ್‌ಪಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಎಸ್‌ಪಿಯನ್ನು ಕಡ್ಡಾಯವಾಗಿ ರಜೆ ಮೇಲೆ ಕಳಿಸಲಾಗಿದೆ. ಆರೋಪಿಗಳಿಗೆ ನಾವು ಸರಿಯಾದ ಶಿಕ್ಷೆಯನ್ನು ಖಚಿತಪಡಿಸುತ್ತೇವೆ ಎಂದು ಹೇಳಿದ್ದಾರೆ.
(ಶಿವಗಂಗೆಯಲ್ಲಿ) ತಿರುಪ್ಪುವನಂ ಯುವಕರು ಎದುರಿಸಿದ ಕ್ರೌರ್ಯ ಯಾರಿಗೂ ಸಂಭವಿಸಬಾರದು. ಇದು ಸಮರ್ಥನೀಯವಲ್ಲದ ತಪ್ಪು. ಈ ಸರ್ಕಾರವು ತಮ್ಮ ಕರ್ತವ್ಯವನ್ನು ನಿರ್ವಹಿಸಲು ವಿಫಲರಾದವರಿಗೆ (ಪೊಲೀಸರಿಗೆ) ಶಿಕ್ಷೆಯನ್ನು ಖಚಿತಪಡಿಸುತ್ತದೆ ಮತ್ತು ಕುಟುಂಬದ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಸ್ಟಾಲಿನ್ ಹೇಳಿದರು.
ಪ್ರಕರಣದ ಹಿನ್ನೆಲೆ: ಶಿವಗಂಗಾ ಜಿಲ್ಲೆಯ ತಿರುಪ್ಪುವನಂ ಬಳಿಯ ಮಾದಾಪುರಂ ಕಾಳಿಯಮ್ಮನ್ ದೇವಸ್ಥಾನದಲ್ಲಿ ಅಜಿತ್ ಕುಮಾರ್ (29) ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ದರ್ಶನ ಪಡೆಯಲು ದೇವಸ್ಥಾನಕ್ಕೆ ಬಂದಿದ್ದ ಮಹಿಳೆಯೊಬ್ಬರು ತಮ್ಮ ಆಭರಣಗಳು ಕಾಣೆಯಾಗಿವೆ ಎಂದು ತಿರುಪ್ಪುವನಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ ಅವರು ಕಾರಿನ ಕೀಯನ್ನು ಅಜಿತ್ ಕುಮಾರ್‌ಗೆ ನೀಡಿದ್ದಾಗಿ ತಿಳಿಸಿದ್ದರು.
ದೂರಿನ ಆಧಾರದ ಮೇಲೆ ಮಾದಾಪುರಂ ದೇವಸ್ಥಾನದ ಭದ್ರತಾ ಸಿಬ್ಬಂದಿ ಅಜಿತ್ ಕುಮಾರ್ ಅವರನ್ನು ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದರು. ಆದರೆ ತನಿಖೆ ನಡೆಯುತ್ತಿರುವಾಗಲೇ ಅಜಿತ್ ಕುಮಾರ್ ಜೂನ್ 29 ರಂದು ಸಾವನ್ನಪ್ಪಿದ್ದರು. ಪೊಲೀಸ್ ಠಾಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಅಜಿತ್ ಕುಮಾರ್ ಏಕಾಏಕಿ ಪ್ರಜ್ಞೆತಪ್ಪಿ ಸಾವನ್ನಪ್ಪಿದ್ದರು ಎಂದು ಆರಂಭದಲ್ಲಿ ಪೊಲೀಸರು ಹೇಳಿದ್ದರು.ಆದರೆ ಇದನ್ನು ಒಪ್ಪದ ಅವರ ಸಂಬಂಧಿಕರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಆಗ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಯಿತು. ತನಿಖೆಯಲ್ಲಿ, ಪೊಲೀಸರ ಕಠಿಣ ವಿಚಾರಣೆಯಿಂದಲೇ ಅಜಿತ್ ಸಾವನ್ನಪ್ಪಿರುವುದು ತಿಳಿದುಬಂದಿತ್ತು.ಈ ಪ್ರಕರಣ ತಮಿಳುನಾಡಿನಾದ್ಯಂತ ಕೋಲಾಹಲಕ್ಕೆ ಕಾರಣವಾಗಿತ್ತು.