ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಮನುಷ್ಯರು ನಿಧನಹೊಂದಿದಾಗ ಹಿಂದು ಸಂಪ್ರದಾಯದಲ್ಲಿ ಅಂತ್ಯಸಂಸ್ಕಾರ ಮಾಡುತ್ತಾರೆ. ಆದ್ರೆ ಪ್ರಾಣಿಗಳು ಸತ್ತಾಗ ಮಾಡುವುದು ತೀರಾ ಅಪರೂಪ.
ಆದ್ರೆ ಕೆಲವು ಕಡೆಗಳಲ್ಲಿ ಪ್ರಾಣಿ ಮತ್ತು ಪಕ್ಷಿಗಳು ಎಂದರೆ ಎಲ್ಲಿಲ್ಲದ ಪ್ರೀತಿ ಹೊಂದಿರುತ್ತಾರೆ. ತಮ್ಮ ಮನೆ ಮಂದಿಯಂತೆ ನೋಡುವವರಿದ್ದಾರೆ. ಆ ರೀತಿ ನೋಡಿದ ಪ್ರಾಣಿ ಅಥವಾ ಪಕ್ಷಿ ಸತ್ತಾಗ ಬೇಸರಗೊಳ್ಳುತ್ತಾರೆ. ಆದ್ರೆ ಇಲ್ಲಿ ಕ್ತಿಯೊಬ್ಬರು ತನ್ನ ಮುದ್ದಿನ ಗಿಳಿ ನಿಧನವಾದ ಹಿನ್ನೆಲೆ ಅಂತಿಮ ವಿಧಿವಿಧಾನಗಳನ್ನು ಹಿಂದು ಸಂಪ್ರದಾಯದಂತೆ ನೆರವೇರಿಸಿದ್ದಾರೆ.
ಪಶ್ಚಿಮ ಬಂಗಾಳದ ಹೆಬ್ರಾದ ಆಯ್ರಾ ಗ್ರಾಮದ ನಿವಾಸಿ ಮಜುಂದಾರ್ ಕಳೆದ 25 ವರ್ಷಗಳಿಂದ ಗಿಳಿಯೊಂದನ್ನು ಸಾಕಿದ್ದ. ಪ್ರೀತಿಯಿಂದ ಭಕ್ತೋ ಎಂದು ಹೆಸರಿಟ್ಟಿದ್ದರು. ಆದರೆ ಅದು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಸಾವನ್ನಪ್ಪಿದೆ.
ಆದ್ರೆ ಗಿಳಿಯನ್ನು ಮನೆ ಸದಸ್ಯನಂತೆ ನೋಡಿಕೊಂಡಿದ್ದ ಮಜುಂದಾರ್ ಕುಟುಂಬವು ಹಿಂದು ಸಂಪ್ರದಾಯಗಳ ಪ್ರಕಾರ ಅದರ ಅಂತ್ಯಕ್ರಿಯೆಯನ್ನು ನಡೆಸಲು ನಿರ್ಧರಿಸಿತ್ತು. ಅಂತ್ಯಸಂಸ್ಕಾರ ನಡೆಸಲು ಸ್ಥಳೀಯರು ಸಹಾಯ ಮಾಡಿದ್ದರು.ಮಜುಂದಾರ್ ಕುಟುಂಬವು ಅರ್ಚಕರನ್ನು ಕರೆದು ಗಿಳಿಯ ಅಂತಿಮ ವಿಧಿಗಳನ್ನು ನೆರವೇರಿಸಿದರು. ಪಾರ್ಥಿವ ಶರೀರವನ್ನು ನೈಹಟಿಯ ಹೂಗ್ಲಿ ನದಿ ಘಾಟ್‍ಗೆ ಕೊಂಡೊಯ್ಯಲಾಯಿತು. ಅಲ್ಲಿ ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು. ಈ ವೇಳೆ 25 ಜನರನ್ನು ಕರೆಸಿ ಊಟ ಹಾಕಿಸಿದ್ದಾರೆ.