ತಿರುಪತಿಯಲ್ಲಿ ಗೋವುಗಳ ಮಾರಣಹೋಮ: TTD ಮಾಜಿ ಅಧ್ಯಕ್ಷನ ವಿರುದ್ಧ ದೂರು ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿರುಪತಿ ತಿರುಮಲ ದೇವಸ್ಥಾನಂ ಮಾಜಿ ಅಧ್ಯಕ್ಷ ಬಿ.ಕರುಣಾಕರ ರೆಡ್ಡಿ ವಿರುದ್ಧ ಟಿಟಿಡಿ ಸದಸ್ಯ ಜಿ ಭಾನು ಪ್ರಕಾಶ್‌ ದೂರು ದಾಖಲಿಸಿದ್ದಾರೆ.

ಟಿಟಿಡಿ ಗೋಶಾಲೆಯಲ್ಲಿನ ನಿರ್ಲಕ್ಷ್ಯದಿಂದಾಗಿ ಕಳೆದ 3 ತಿಂಗಳಲ್ಲಿ 100 ಗೋವುಗಳು ಮೃತಪಟ್ಟಿವೆ ಎಂದು ರೆಡ್ಡಿ ಆರೋಪಿಸಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದೂ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ದೂರು ನೀಡಿದ್ದಾರೆ.

ಟಿಟಿಡಿ ಗೋಶಾಲೆಯಲ್ಲಿ ಗೋವುಗಳು ಮೃತಪಡುತ್ತಿವೆ ಎಂದು ಆರೋಪಿಸುವ ಮೂಲಕ ಟಿಟಿಡಿ ಘನತೆಗೆ ಚ್ಯುತಿ ತರಲು ರೆಡ್ಡಿ ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ, ಜನಸಾಮಾನ್ಯರ ಕಣ್ಣಿನಲ್ಲಿ ದೇಗುಲದ ಗೌರವಕ್ಕೂ ಚ್ಯುತಿ ತರುತ್ತಿದ್ದು, ಮಾನಹಾನಿಕರವೂ ಆಗಿದೆ. ಎಂದು ಪ್ರಕಾಶ್‌ ಆರೋಪಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!