ಹೊಸದಿಗಂತ ವರದಿ ತುಮಕೂರು:
ಪಾವಗಡದ ಸರ್ಕಾರಿ ಆಸ್ಪತ್ರೆಯಲ್ಲಿ ಮೂವರು ಗರ್ಭಿಣಿಯರ ಸಾವಿಗೆ ಸಂಬಂಧಿಸಿದಂತೆ ಒಬ್ಬ ವೈದ್ಯರೂ ಸೇರಿದಂತೆ ಮೂವರನ್ನು ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ಅವರು ಅಮಾನತು ಗೊಳಿಸಿದ್ದಾರೆ.
ತನಿಖೆಯ ಸಂದರ್ಭದಲ್ಲಿ ಹೊಸಶಸ್ತ್ರ ಚಿಕಿತ್ಸಾ ಕೊಠಡಿಯನ್ನುಮತ್ತು ಶಸ್ತ್ರ ಚಿಕಿತ್ಸೆಗೆ ಬಳಸುವ ಉಪಕರಣಗಳನ್ನು ಸ್ಟೆರಲೈಜ್ (auto clave)ಮಾಡದೆ ಇರುವುದು ಕಂಡು ಬಂದಿದೆ ಎಂದು ಅವರು ಹೇಳಿದ್ದಾರೆ.
ಹೊಸ ಶಸ್ತ್ರ ಚಿಕಿತ್ಸೆಯ ಕೊಠಡಿಯನ್ನು ಸುರಕ್ಷಿತ ದೂಮೀಕರಣ ಮಾಡಲಾಗಿಲ್ಲ ಇದರಿಂದ ಸೋಂಕು ಆಗಿದೆ, ಆದ್ದರಿಂದ ಈ ನಿರ್ಲಕ್ಷ್ಯ ವಹಿಸಿರುವ ಕಾರಣದಿಂದ ಎನ್.ಹೆಚ್.ಎಂ. ಕಾರ್ಯಕ್ರಮದ ಅಡಿಯಲ್ಲಿ ನೇಮಕವಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಪ್ರಶಸ್ತಿ ಮತ್ತು ಸ್ತ್ರೀರೋಗ ತಜ್ಞ ರಾದ ಡಾ.ಪೂಜಾ, ಶ್ರುಶೂಣಾಧಿಕಾರಿ .ಜಿ.ಪದ್ಮಾವತಿ ಮತ್ತು ಓ.ಟಿ.ತಜ್ಞ ರಾದ ಕಿರಣ್ .ಜಿ.ಆರ್ .ಅವರನ್ನು ಅಮಾನತು ಗೊಳಿಸಿದ್ದಾರೆ. ಇವರ ನಿರ್ಲಕ್ಷ್ಯ ದಿಂದ ಗರ್ಭಿಣಿಯರಾದ ಅನಿತಾ,ಅಂಜಲಿ ಮತ್ತು ನರಸಮ್ಮ ಮೃತರಾಗಿದ್ದರು.