ಹೊಸದಿಗಂತ ಡಿಜಿಟಲ್ ಡೆಸ್ಕ್ :
ಟರ್ಕಿ (Turkey), ಸಿರಿಯಾ (Syria) ದೇಶಗಳು ಭೂಕಂಪನಕ್ಕೆ ಅಕ್ಷರಶ ತತ್ತರಿಸಿದ್ದು, ಕಳೆದ 24 ಗಂಟೆಯಲ್ಲಿ 3 ಬಾರಿ ಪ್ರಬಲ ಭೂಕಂಪ (Earthquake) ಸಂಭವಿಸಿದ್ದು, ಸಾವಿನ ಸಂಖ್ಯೆಯು ಹೆಚ್ಚುತ್ತಿದೆ.
ಕಳೆದ 24 ಗಂಟೆಯಲ್ಲಿ ಸರಿಸುಮಾರು 2,300 ಮಂದಿ ಬಲಿಯಾಗಿದ್ದಾರೆ. ಸಾವಿರಾರು ಮಂದಿ ಕಣ್ಮರೆಯಾಗಿದ್ದಾರೆ. 8 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಾರ್ಯಾಚರಣೆ ಮುಂದುವರಿದಿದೆ.
ಟರ್ಕಿ ಕಾಲಮಾನ ನಸುಕಿನ ಜಾವ 4.17ಕ್ಕೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ (Earthquake) ತೀವ್ರತೆ 7.8 ದಾಖಲಾಗಿದೆ. ಆಗ್ನೇಯ ಟರ್ಕಿಯ ಗಾಜಿಯಾನ್ ತೆಪ್ ಪ್ರಾಂತ್ಯದಿಂದ 33 ಕಿಲೋಮೀಟರ್ ದೂರದಲ್ಲಿ, 18 ಕಿಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಕಂಡುಬಂದಿದೆ.
ಭೂಕಂಪದ ತೀವ್ರತೆಗೆ ಸಾವಿರಾರು ಕಟ್ಟಡಗಳು ಆಟಿಕೆಗಳ ರೀತಿಯಲ್ಲಿ ನೆಲಸಮಗೊಂಡಿವೆ.
ಟರ್ಕಿ, ಸಿರಿಯಾದ ಭೂ ಕಂಪನ ಕಂಡು ವಿಶ್ವವೇ ಆತಂಕ ವ್ಯಕ್ತಪಡಿಸಿದ್ದು, ಭಾರತದ ಪ್ರಧಾನಿ ಮೋದಿ (Narendra Modi), ಈ ಎರಡು ದೇಶಗಳಿಗೆ ನೆರವು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈಗಾಗಲೇ ಎರಡು ಎನ್‌ಡಿಆರ್‌ಎಫ್ (NDRF) ತಂಡ, ವೈದ್ಯಕೀಯ ತಂಡ, ಪರಿಹಾರ ಸಾಮಗ್ರಿಯನ್ನು ಭಾರತ ಸರ್ಕಾರ (Government Of India) ಟರ್ಕಿಗೆ ಕಳಿಸಿಕೊಟ್ಟಿದೆ.
ಈ ಬೆನ್ನಲ್ಲೇ ಅಮೆರಿಕ ಜರ್ಮನಿ ಸೇರಿದಂತೆ ವಿಶ್ವದ 45 ರಾಷ್ಟ್ರಗಳು ನೆರವು ಘೋಷಣೆ ಮಾಡಿದೆ.