ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಭೂಕಂಪನಕ್ಕೆ ತತ್ತರಿಸಿ, ಸುನಾಮಿ ಭೀತಿಯಲ್ಲಿ ಬದುಕುತ್ತಿರುವ ಜಪಾನ್ ಜನತೆಗೆ ಪ್ರಕೃತಿ ಮತ್ತೊಮ್ಮೆ ಆಘಾತ ನೀಡಿದೆ.
ಹೊಸ ವರ್ಷದ ದಿನದಂದು ಒಂದೇ ದಿನ 155 ಬಾರಿ ಭೂಮಿ ಕಂಪಿಸಿದ್ದು, ಇಂದು ಕೂಡ ಮತ್ತೆ ಭೂಕಂಪವಾಗಿದೆ. ಹಲವೆಡೆ ಭೂಕುಸಿತ, ಮನೆಗಳು ಬಿದ್ದಿದ್ದು, ಹಾಗೇ ರಸ್ತೆಗಳು ಕುಸಿದಿದ್ದು, ಮೃತರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ.
ರಸ್ತೆಗಳಲ್ಲಿ ಬಿರುಕು ಬಿಟ್ಟು ಬಿದ್ದಿರುವ ಕಾರಣ ರಕ್ಷಣಾ ಕಾರ್ಯಾಚರಣೆಯೇ ಕಷ್ಟಸಾಧ್ಯವಾಗಿದೆ. ವಾಯುಮಾರ್ಗದ ಮೂಲಕ ರಕ್ಷಣಾಕಾರ್ಯ ನಡೆಯುತ್ತಿದ್ದು, ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸಾವಿರಕ್ಕೂ ಹೆಚ್ಚು ಮಂದಿ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಮೂವತ್ತು ಸಾವಿರಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ.