ಕೇರಳದಲ್ಲಿ ಮುಸ್ಲಿಂ ಲೀಗ್ ಪ್ರತಿಭಟನೆಯಲ್ಲಿ ದ್ವೇಷದ ಘೋಷಣೆ: ಕಾಂಗ್ರೆಸ್ ನ ನಿಲುವು ಏನೆಂದು ಕೇಳಿದ ಅನಿಲ್ ಆಂಟನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇರಳದಲ್ಲಿ (Kerala)ಮಣಿಪುರದ ಜನರಿಗೆ ಬೆಂಬಲ ವ್ಯಕ್ತಪಡಿಸಲು ಮುಸ್ಲಿಂ ಯೂತ್ ಲೀಗ್ ಆಯೋಜಿಸಿದ ಮೆರವಣಿಯಲ್ಲಿ ‘ನಿಮಗೆ ರಾಮಾಯಣ ಪಠಿಸಲು ಸಾಧ್ಯವಾಗುವುದಿಲ್ಲ. ನಾವು ನಿಮ್ಮನ್ನು ನಿಮ್ಮ ದೇವಾಲಯಗಳಲ್ಲಿ ನೇತು ಹಾಕುತ್ತೇವೆ. ನಿಮ್ಮನ್ನು ಸಜೀವ ದಹನ ಮಾಡುತ್ತೇವೆ ಎಂದು ಘೋಷಣೆಯನ್ನು ಕೂಗುತ್ತಿದ್ದು, ಇದೀಗ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ಬಿಜೆಪಿ ಮುಖಂಡ ಅನಿಲ್ ಕೆ.ಆಂಟನಿ ವಾಗ್ದಾಳಿ ನಡೆಸಿದ್ದು, I.N.D.I.A ಒಕ್ಕೂಟದಲ್ಲಿರುವ ಮುಸ್ಲಿಂ ಲೀಗ್, ಕಾಂಗ್ರೆಸ್, ಸಿಪಿಎಂ, ಕೇರಳದ ಸಿಪಿಐಎಂನ ಪ್ರತಿಕ್ರಿಯೆ ಏನು ? ಇದರ ಬಗ್ಗೆ ಕೇರಳದ ಕಾಂಗ್ರೆಸ್ ಪಕ್ಷ ಏನು ಹೇಳುತ್ತದೆ? ಈ ರೀತಿಯ ಕೋಮು ದ್ವೇಷ ಮತ್ತು ಹಿಂಸಾಚಾರವನ್ನು ಹರಡುವುದು ಕೇರಳ ಮತ್ತು ಭಾರತದಲ್ಲಿ ಸಾಮಾನ್ಯ ಸಂಗತಿ ಎಂದು ಅಂದುಕೊಂಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ಕಾಞಂಗಾಡ್ ಪ್ರತಿಭಟನೆಯ ಈ ಆಘಾತಕಾರಿ ದೃಶ್ಯಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಹಿಂದುಗಳನ್ನು ಗುರಿಯಾಗಿಟ್ಟುಕೊಂಡು ಮುಸ್ಲಿಂ ಲೀಗ್‌ನ ‘ನಿಮ್ಮನ್ನು ದೇವಾಲಯಗಳಲ್ಲಿ ನೇತು ಹಾಕುತೇತೇವೆ, ‘ನಿಮ್ಮನ್ನು ಸಜೀವ ದಹನ ಮಾಡುತ್ತೇವೆ ಎಂಬ ಘೋಷಣೆಗಳು ಖಂಡನೀಯ ಮತ್ತು ಸಮರ್ಥನೀಯವಲ್ಲ. ರಾಹುಲ್ ಗಾಂಧಿ ಅವರು ‘ಜಾತ್ಯತೀತ’ ಎಂದು ಕರೆಯುವ ಪಕ್ಷದ ಕಾರ್ಯಗಳಿಗೆ ಜವಾಬ್ದಾರರಾಗಿರಬೇಕು. ಈ ನಿದರ್ಶನವು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಹಿಂದು ಸಮಾಜವನ್ನು ಗುರಿಯಾಗಿಸಿಕೊಂಡಿರುವ ಆತಂಕಕಾರಿ ಸೂಚಕವಾಗಿದೆ ಎಂದು ಕೇರಳ ಬಿಜೆಪಿ ಕೂಡ ವಿಡಿಯೊ ಟ್ವೀಟ್ ಮಾಡಿ ಟೀಕಿಸಿದೆ.

ಏನಿದು ಪ್ರಕರಣ?
ಕೇರಳದ ಕಾಸರಗೋಡು ಜಿಲ್ಲೆಯ ಕಾಞಂಗಾಡ್‌ನಲ್ಲಿ ಮುಸ್ಲಿಂ ಲೀಗ್‌, ಮಣಿಪುರದ ಹಿಂಸಾಚಾರ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಲೀಗ್ ಸದಸ್ಯರು ದ್ವೇಷದ ಘೋಷಣೆ ಕೂಗಿದ್ದಾರೆ. ಘೋಷಣೆ ಕೂಗಿದ ಕಾಞಂಗಾಡ್ ನಗರಸಭೆಯ ಅಬ್ದುಲ್ ಸಲಾಂ ಎಂಬ ವ್ಯಕ್ತಿಯನ್ನು ಪಕ್ಷದಿಂದ ವಜಾ ಮಾಡಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಕೆ ಫಿರೋಜ್ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!