ಮಣಿಪುರ ‘ಡಿಸ್ಟರ್ಬ್ಡ್ ಏರಿಯಾ’ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಣಿಪುರ (Manipur) ದಲ್ಲಿ ಮತ್ತೆ ಹಿಂಸಾಚಾರ ಶುರುವಾಗಿದ್ದು,ಹೀಗಾಗಿ ರಾಜ್ಯವನ್ನು ಕಠಿಣ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ ಅಡಿಯಲ್ಲಿ ಇರಿಸಲಾಗಿದೆ.

ಅಕ್ಟೋಬರ್​​ ಒಂದರಿಂದ ಮಣಿಪುರದಲ್ಲಿ ಕಠಿಣ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆಯನ್ನು ಜಾರಿ ಮಾಡಲಾಗುವುದು ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಮಣಿಪುರದಲ್ಲಿ ಆರು ತಿಂಗಳವರೆಗೆ ಎಎಫ್​ಎಸ್​​ಪಿಎ(Armed Forces Special Powers Act) ಜಾರಿಯಲ್ಲಿರುತ್ತದೆ. ಇನ್ನು ಈ ಕಾಯಿದೆಯಿಂದ ಕಣಿವೆ ಪ್ರದೇಶಗಳನ್ನು ಒಳಗೊಂಡಿರುವ 19 ಪೊಲೀಸ್ ಠಾಣೆಗಳನ್ನು ಹೊರಗಿಡಲಾಗಿದೆ.

ಸರ್ಕಾರ ಹೊರಡಿಸಿರುವ ಅಧಿಕೃತ ಪ್ರಕಟಣೆಯಲ್ಲಿ 19 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನು ಹೊರತುಪಡಿಸಿ ಇಡೀ ಮಣಿಪುರ ರಾಜ್ಯವನ್ನು ಆರು ತಿಂಗಳವರೆಗೆ ‘ಡಿಸ್ಟರ್ಬ್ಡ್ ಏರಿಯಾ’ (ತೊಂದರೆಗೊಳಗಾದ ಪ್ರದೇಶ) ಎಂದು ಘೋಷಿಸಲಾಗಿದೆ. ಇದಕ್ಕೆ ರಾಜ್ಯಪಾಲರು ಒಪ್ಪಿಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಅಕ್ಟೋಬರ್ 1, 2023 ರಿಂದ ಜಾರಿಗೆ ಬರುವಂತೆ ಇನ್ನು ಆರು ತಿಂಗಳು ಈ ಅಧಿಸೂಚನೆಯನ್ನು ಪಾಲನೆ ಮಾಡಲಾಗುತ್ತದೆ ಎಂದು ಹೇಳಿದೆ. ಈ ಕಾಯಿದೆಯಡಿ ಇಂಫಾಲ್, ಲ್ಯಾಂಫೆಲ್, ಸಿಟಿ, ಸಿಂಗ್ಜಮೇ, ಸೆಕ್ಮಾಯಿ, ಲಮ್ಸಾಂಗ್, ಪಾಸ್ಟೋಲ್, ವಾಂಗೋಯ್, ಪೊರಂಪಾಟ್, ಹೀಂಗಾಂಗ್, ಲಾಮ್ಲೈ, ಇರಿಬಂಗ್, ಲೈಮಾಖೋಂಗ್, ತೌಬಲ್, ಬಿಷ್ಣುಪುರ್, ನಂಬೋಲ್, ಮೊಯಿರಾಂಗ್, ಕಕ್ಚ್ ಜಿರ್ಬಾಮ್ ಪೊಲೀಸ್ ಠಾಣೆ ಗಳು ಸೇರಿಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!