ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಯಲ್ಲಿ ಅಪಘಾತಗಳ ಪ್ರಮಾಣ ಇಳಿಕೆ: ಅಲೋಕ್‌ ಕುಮಾರ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ (Bengaluru-Mysuru Expressway) ಕಟ್ಟುನಿಟ್ಟಿನ ಕ್ರಮಕೈಗೊಂಡ ಕಾರಣ ಅಪಘಾತಗಳ ಸಂಖ್ಯೆ ಇಳಿಕೆಯಾಗಿದೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ (Alok Kumar) ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿದ ಅವರು, ಪೊಲೀಸರ ಕಟ್ಟುನಿಟ್ಟಿನ ಕ್ರಮದಿಂದಾಗಿ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತಗಳಿಂದ ಉಂಟಾಗುತ್ತಿದ್ದ ಸಾವಿನ ಸಂಖ್ಯೆ ಇಳಿಮುಖವಾಗಿದೆ. ಜು.23 ರ ಹೊತ್ತಿಗೆ ಸಾವಿನ ಸಂಖ್ಯೆ 8 ಕ್ಕೆ ಇಳಿದಿದೆ. ಮೇ ತಿಂಗಳಲ್ಲಿ 29 ಸಾವುಗಳಾಗಿದ್ದವು. ಜೂನ್‌ ತಿಂಗಳಲ್ಲಿ 28 ಮಂದಿ ಮೃತಪಟ್ಟಿದ್ದರು. ಹೆಚ್ಚಿನ ಅಪಘಾತಗಳಿಗೆ ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ. ಸಾವಿನ ಸಂಖ್ಯೆ ಒಂದಂಕಿಗೆ ಇಳಿಯಲು ಕಾರಣರಾದ ನಮ್ಮ ಪೊಲೀಸ್‌ ಸಿಬ್ಬಂದಿಗೆ ಅಭಿನಂದನೆ ಎಂದು ಟ್ವೀಟ್‌ ಮಾಡಿ ಎಡಿಜಿಪಿ ಕೃತಜ್ಞತೆ ಸಲ್ಲಿಸಿದ್ದಾರೆ.

ಜುಲೈ ತಿಂಗಳಲ್ಲಿ ಅಪಘಾತಗಳ ಸಾವಿನ ಸಂಖ್ಯೆ 8 ಕ್ಕೆ ಇಳಿದಿದೆ. ರಾಮನಗರ ವ್ಯಾಪ್ತಿಯಲ್ಲಿ 3, ಮಂಡ್ಯ ವ್ಯಾಪ್ತಿಯಲ್ಲಿ 5 ಮಂದಿ ಮೃತಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಮತ್ತಷ್ಟು ಇಳಿಮುಖ ಆದರೆ ವೇಗದ ಮಿತಿ ಏರಿಕೆಗೆ ಚಿಂತನೆ ನಡೆಸಲಾಗಿದೆ. ಪ್ರತಿ ಗಂಟೆಗೆ 100 ರಿಂದ 120 ಕಿ.ಮೀಗೆ ಏರಿಸಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.

ಹೆದ್ದಾರಿಯಲ್ಲಿ ಹೆಚ್ಚುತ್ತಿದ್ದ ಅಪಘಾತ ಸಂಖ್ಯೆಗಳನ್ನು ನಿಯಂತ್ರಿಸಲು ಪೊಲೀಸರ ನಿಯೋಜನೆ, ಎಐ ಕ್ಯಾಮೆರಾ ಅಳವಡಿಕೆ, ವಾಹನಗಳ ವೇಗಕ್ಕೆ ಮಿತಿ, ದ್ವಿಚಕ್ರ ಹಾಗೂ ತ್ರಿಚರ್ಕ ವಾಹನಗಳ ಸಂಚಾರಕ್ಕೆ ನಿರ್ಬಂಧ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!