Tuesday, January 13, 2026
Tuesday, January 13, 2026
spot_img

Deep Fry VS Air Fry | ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಬೆಸ್ಟ್! ನೀವ್ ಹೇಗೆ ತಿಂತಿದ್ದೀರಾ?

ಇಂದಿನ ವೇಗದ ಜೀವನಶೈಲಿಯಲ್ಲಿ ಫ್ರೈಡ್ ಆಹಾರವನ್ನು ನೆಚ್ಚಿಕೊಳ್ಳುವವರೇ ಹೆಚ್ಚು. ಆದರೆ ಪ್ರತಿದಿನ ಎಣ್ಣೆಯಲ್ಲಿ ಕರಿದ ಆಹಾರ ತಿಂದರೆ ಆರೋಗ್ಯದ ಗತಿ ಏನು ಎನ್ನುತ್ತಾರೆ. ಅದ್ಕಕೆ ಕೆಲವರು ಏರ್ ಫ್ರಯರ್ ಬಳಸಿ ಎಣ್ಣೆಯ ತಯಾರಿಸುತ್ತಾರೆ. ಆದರೆ ಡೀಪ್ ಫ್ರೈ ಮತ್ತು ಏರ್ ಫ್ರೈ – ಈ ಎರಡು ವಿಧಾನಗಳಲ್ಲಿ ಯಾವುದು ಉತ್ತಮ ಎಂದು ಕೇಳಿದರೆ ಹೆಚ್ಚಿನವರು ಏರ್ ಫ್ರಯರ್ ಎಂದೇ ಹೇಳುತ್ತೀರಿ. ನಮಗೆ ಈಎರಡರ ನಡುವೆ ನಡುವೆ ಇರುವ ವ್ಯತ್ಯಾಸವನ್ನು ತಿಳಿದರೆ, ದಿನನಿತ್ಯದ ಆಹಾರದಲ್ಲಿ ಉತ್ತಮ ಆಯ್ಕೆಯನ್ನು ಮಾಡಿಕೊಳ್ಳಬಹುದು.

ಡೀಪ್ ಫ್ರೈ ಎಂದರೇನು?

ಡೀಪ್ ಫ್ರೈ ಮಾಡುವಾಗ ಆಹಾರವನ್ನು ಹೆಚ್ಚು ಎಣ್ಣೆಯಲ್ಲಿ ಮುಳುಗಿಸಿ ಬೇಯಿಸಲಾಗುತ್ತದೆ. ಇದರಿಂದ ಆಹಾರ ಕ್ರಿಸ್ಪಿ ಆಗಿ ರುಚಿಕರವಾಗುತ್ತದೆ. ಆದರೆ ಹೆಚ್ಚಿನ ಎಣ್ಣೆ ಆಹಾರದಲ್ಲಿ ಹೀರಿಕೊಳ್ಳುವುದರಿಂದ ಕ್ಯಾಲೊರಿ, ಕೊಬ್ಬು ಮತ್ತು ಟ್ರಾನ್ಸ್ ಫ್ಯಾಟ್ ಪ್ರಮಾಣ ಹೆಚ್ಚುತ್ತದೆ. ಇದು ತೂಕ ಹೆಚ್ಚಳ, ಹೃದಯ ಸಮಸ್ಯೆ, ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಕಾರಣವಾಗಬಹುದು.

ಏರ್ ಫ್ರೈ ಹೇಗೆ ವಿಭಿನ್ನ?

ಏರ್ ಫ್ರೈನಲ್ಲಿ ತುಂಬಾ ಕಡಿಮೆ ಎಣ್ಣೆ ಅಥವಾ ಎಣ್ಣೆಯೇ ಇಲ್ಲದೆ ಬಿಸಿ ಗಾಳಿಯ ಮೂಲಕ ಆಹಾರವನ್ನು ಬೇಯಿಸಲಾಗುತ್ತದೆ. ಇದರಿಂದ ಆಹಾರ ಕ್ರಿಸ್ಪಿ ಆಗಿಯೇ ಇರುತ್ತದೆ, ಆದರೆ ಕೊಬ್ಬಿನ ಪ್ರಮಾಣ ಬಹಳ ಕಡಿಮೆ. ತೂಕ ಇಳಿಕೆ, ಹೃದಯ ಆರೋಗ್ಯ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದು ಸಹಕಾರಿ.

ಆರೋಗ್ಯದ ಹೋಲಿಕೆ

ಡೀಪ್ ಫ್ರೈ ರುಚಿಯಲ್ಲಿ ಮೇಲುಗೈ ಹೊಂದಿದರೂ, ಏರ್ ಫ್ರೈ ಆರೋಗ್ಯದ ದೃಷ್ಟಿಯಿಂದ ಉತ್ತಮ. ಏರ್ ಫ್ರೈ ಮಾಡಿದ ಆಹಾರದಲ್ಲಿ ಕ್ಯಾಲೊರಿ ಕಡಿಮೆ, ಜೀರ್ಣಕ್ರಿಯೆ ಸುಲಭ ಮತ್ತು ದೇಹದ ಮೇಲೆ ಒತ್ತಡ ಕಡಿಮೆ.

ರುಚಿಗೆ ಮಾತ್ರ ಒತ್ತು ಕೊಟ್ಟರೆ ಡೀಪ್ ಫ್ರೈ, ಆರೋಗ್ಯಕ್ಕೂ ಮಹತ್ವ ಕೊಟ್ಟರೆ ಏರ್ ಫ್ರೈ ಉತ್ತಮ ಆಯ್ಕೆ. ನೀವಂತೂ ಯಾವ ವಿಧಾನವನ್ನು ಆರಿಸುತ್ತೀರಾ?

Most Read

error: Content is protected !!