Tuesday, October 21, 2025

Deepavali | ಈ ಬಾರಿ ಪರಿಸರ ಸ್ನೇಹಿ ದೀಪಾವಳಿ ನಿಮ್ಮಿಂದಲೇ ಶುರುವಾಗ್ಲಿ! ಏನಂತೀರಾ?

ನಮಗೆಲ್ಲಾ ದೀಪಾವಳಿ ಬಂತು ಅಂದ್ರೆ ಏನೋ ಒಂದು ಖುಷಿ ಅಲ್ವಾ?ಸಿಂಗಾರಗೊಂಡ ಮನೆ, ಸಿಹಿತಿಂಡಿಗಳು, ಪಟಾಕಿ ಸದ್ದು ಈ ಎಲ್ಲವೂ ಹಬ್ಬದ ಒಂದು ಭಾಗ. ಆದರೆ, ಈ ಸದ್ದು-ಹೊಗೆ ಪರಿಸರಕ್ಕೆ ಹಾನಿಯಾಗುತ್ತೆ ಅನ್ನೋದನ್ನ ನಾವು ಕೆಲವೊಮ್ಮೆ ಮರೆತು ಬಿಡುತ್ತೇವೆ. ಹೀಗಾಗಿ ಈ ಬಾರಿ, ನಾವು ದೀಪಾವಳಿಯನ್ನು ಸ್ವಲ್ಪ ವಿಭಿನ್ನವಾಗಿ ಅಂದ್ರೆ ಪರಿಸರ ಸ್ನೇಹಿಯಾಗಿ ಆಚರಿಸೋಣ! ಪ್ರಕೃತಿಯನ್ನ ಕಾಪಾಡುತ್ತಾ ಹಬ್ಬದ ಖುಷಿಯನ್ನ ಡಬಲ್ ಮಾಡಬಹುದು. ಹೇಗೆ ಅಂತೀರಾ? ಇಲ್ಲಿದೆ ನೋಡಿ.

  • ಪಟಾಕಿಗಳ ಬದಲು ದೀಪಗಳು: ಹೊಗೆ, ಶಬ್ದ ಮಾಲಿನ್ಯವನ್ನು ತಡೆಗಟ್ಟಲು ಪಟಾಕಿ ಸಿಡಿಸುವುದನ್ನು ತಪ್ಪಿಸಿ, ಬದಲಿಗೆ ಮಣ್ಣಿನ ದೀಪಗಳು ಮತ್ತು ಎಲ್‌ಇಡಿ ದೀಪಗಳಿಂದ ಮನೆ ಅಲಂಕರಿಸಬಹುದು. ಅಷ್ಟಕ್ಕೂ ಪಟಾಕಿ ಬೇಕೇ ಬೇಕು ಅಂದ್ರೆ ಇದೆ ಅಲ್ವಾ ಹಸಿರು ಪಟಾಕಿ ಅದನ್ನ ಬಳಸಿ.
  • ಪ್ಲಾಸ್ಟಿಕ್‌ನಿಂದ ದೂರ: ಅಲಂಕಾರಕ್ಕೆ ಪ್ಲಾಸ್ಟಿಕ್ ಹೂಗಳು, ಬ್ಯಾನರ್‌ಗಳ ಬದಲು ಹಾಳೆ ಅಥವಾ ಹೂಗಳಿಂದ ಅಲಂಕಾರ ಮಾಡುವುದು ಬೆಸ್ಟ್.
  • ನೈಸರ್ಗಿಕ ಬಣ್ಣ ಬಳಕೆ: ರಂಗೋಲಿ ಹಾಕಲು ರಾಸಾಯನಿಕ ಬಣ್ಣಗಳ ಬದಲು ಅಕ್ಕಿ ಹಿಟ್ಟು, ಹಳದಿ, ಕಾಫಿ ಪುಡಿ ಮುಂತಾದ ನೈಸರ್ಗಿಕ ವಸ್ತುಗಳನ್ನು ಬಳಸುವುದು ಆರೋಗ್ಯಕ್ಕೂ ಹಿತ.
  • ವಿದ್ಯುತ್ ಉಳಿತಾಯ: ಎಲ್‌ಇಡಿ ಬಲ್ಬ್‌ಗಳು ಅಥವಾ ಸೌರ ಶಕ್ತಿ ಆಧಾರಿತ ದೀಪಗಳನ್ನು ಬಳಸುವುದರಿಂದ ವಿದ್ಯುತ್ ಉಳಿತಾಯ ಸಾಧ್ಯ.

ದೀಪಾವಳಿ ಎಂದರೆ ಕೇವಲ ಬೆಳಕಿನ ಹಬ್ಬವಲ್ಲ, ಅದು ಪ್ರಕೃತಿಯೊಂದಿಗೆ ಸಹಜ ಸಂತೋಷ ಹಂಚಿಕೊಳ್ಳುವ ಹಬ್ಬವಾಗಿದೆ.

error: Content is protected !!