ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಬಿಗ್ ಬಾಸ್ (Bigg Boss Kannada) ರಿಯಾಲಿಟಿ ಶೋ ಮೂಲಕ ಮನೆ ಮಾತಾದ ಶೈನ್ ಶೆಟ್ಟಿ (Shine Shetty) ಮತ್ತು ದೀಪಿಕಾ ದಾಸ್ (Deepika Das) ಮದ್ವೆಆಗ್ತಾರಾ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಇದರ ನಡುವೆ ಇಬ್ಬರು
ಭೇಟಿಯಾಗಿದ್ದಾರೆ.
ಶೈನ್‌ನ ಭೇಟಿಯಾಗಿರೋದರ ಬಗ್ಗೆ ದೀಪಿಕಾ ದಾಸ್ ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ಜೋಡಿ ದೊಡ್ಮನೆಯಲ್ಲಿ ಹೈಲೈಟ್ ಆಗಿದ್ದರು. ಮೊದಲ ಭೇಟಿಯಿಂದ ಇಂದಿನವರೆಗೂ ಇವರಿಬ್ಬರ ನಡುವೆ ಒಳ್ಳೆಯ ಗೆಳೆತನವಿದೆ.
ಈಗ ಶೈನ್ ಶೆಟ್ಟಿಯನ್ನ ಭೇಟಿಯಾಗಿರುವುದರ ಬಗ್ಗೆ ದೀಪಿಕಾ ದಾಸ್ ಪೋಸ್ಟ್ ಹಂಚಿಕೊಂಡಿದ್ದಾರೆ. ಯಾರಿದು ಗೆಸ್ ಮಾಡಿ ಎಂದು ಹೇಳಿ, ಶೈನ್ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ.
ಇನ್ನೂ ಶೈನ್ ಮತ್ತು ದೀಪಿಕಾ ದಾಸ್ ಒಟ್ಟಿಗೆ ನೋಡಿದ ಅಭಿಮಾನಿಗಳು ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ.