ಹೊಸದಿಗಂತ ಡಿಜಿಟಲ್ ಡೆಸ್ಕ್ :
ನಟಿ ದೀಪಿಕಾ ಪಡುಕೋಣೆ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದಾರೆ. ಸದ್ಯ ಫ್ಯೂಚರ್‌ನಲ್ಲಿ ಅವರ ಸಿನಿಮಾಗಳು ಬರಲಿವೆ. ತಾಯ್ತನದ ಈ ಬ್ರೇಕ್‌ನಲ್ಲೂ ದೀಪಿಕಾ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ದೀಪಿಕಾ ಪಡುಕೋಣೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಸುಮಾರು ಎಂಟು ಕೋಟಿ ಫಾಲೋವರ್ಗಳನ್ನು ದೀಪಿಕಾ ಪಡುಕೋಣೆ ಹೊಂದಿದ್ದಾರೆ. ತಮ್ಮ ಚಿತ್ರಗಳು, ಫೋಟೊಶೂಟ್, ಸಿನಿಮಾ ಮಾಹಿತಿ ಮತ್ತು ಜಾಹೀರಾತುಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ನಟಿ ದೀಪಿಕಾ ಪಡುಕೋಣೆ ಹಂಚಿಕೊಂಡಿದ್ದ ರೀಲ್ ಒಂದು ಈಗ ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಣೆಗೆ ಒಳಪಟ್ಟ ರೀಲ್ಸ್ ಎನಿಸಿಕೊಂಡಿದೆ.
ಹಿಲ್ಟನ್ ಹೋಟೆಲಿನ ರಾಯಭಾರಿ ಆಗಿರುವ ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೆ ‘ಹಿಲ್ಟನ್’ನ ಜಾಹೀರಾತಿನ ವಿಡಿಯೋ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಜೂನ್ 9 ರಂದು ಜಾಹೀರಾತನ್ನು ದೀಪಿಕಾ ಪಡುಕೋಣೆ ಶೇರ್ ಮಾಡಿದ್ದರು. ಆ ವಿಡಿಯೋ ಇದೀಗ 1.9 ಬಿಲಿಯನ್ ವೀವ್ಸ್ ಕಂಡಿದೆ. ಅಂದರೆ ಬರೋಬ್ಬರಿ 190 ಕೋಟಿ ಬಾರಿ ದೀಪಿಕಾರ ಆ ವಿಡಿಯೋ ಅನ್ನು ವೀಕ್ಷಿಸಲಾಗಿದೆ. ಇನ್ಸ್ಟಾಗ್ರಾಂನಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ವೀಕ್ಷಣೆಗೆ ಒಳಪಟ್ಟ ಇನ್ನೊಂದು ವಿಡಿಯೋ ಇಲ್ಲ.
ಈ ಹಿಂದೆ ಹಾರ್ದಿಕ್ ಪಾಂಡ್ಯಾರ ರೀಲ್ ಒಂದು 1.6 ಬಿಲಿಯನ್ ವೀಕ್ಷಣೆ ಕಂಡಿತ್ತು. ವಿಶ್ವ ವಿಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ರೀಲ್ಸ್ ಒಂದು 1.5 ಬಿಲಿಯನ್ ವೀಕ್ಷಣೆ ಕಂಡಿತ್ತು. ಆದರೆ ದೀಪಿಕಾ ಪಡುಕೋಣೆಯ ರೀಲ್ಸ್ ಎಲ್ಲ ದಾಖಲೆಗಳನ್ನು ಮುರಿದು ಬಿಸಾಡಿದೆ. ಆಗಸ್ಟ್ 4ಕ್ಕೆ ದೀಪಿಕಾ ಪಡುಕೋಣೆಯ ರೀಲ್ಸ್ 190 ಕೋಟಿ ವೀವ್ಸ್ ಪಡೆದುಕೊಂಡಿತ್ತು. ಸುಮಾರು 11 ಲಕ್ಷ ಲೈಕ್ಸ್ಗಳನ್ನು ಸಹ ಈ ವಿಡಿಯೋ ಪಡೆದುಕೊಂಡಿದೆ.