ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ನಟಿ ದೀಪಿಕಾ ಪಡುಕೋಣ್ ಕಲ್ಕಿ ಈವೆಂಟ್‌ನಲ್ಲಿ ಕಾಣಿಸಿಕೊಂಡಿದ್ದರು. ಏಳು ತಿಂಗಳ ಗರ್ಭಿಣಿಯಾಗಿರುವ ದೀಪಿಕಾ ಬ್ಲಾಕ್ ಡ್ರೆಸ್‌ನಲ್ಲಿ ಕಂಗೊಳಿಸಿದ್ರು. ಏಳು ತಿಂಗಳಾದ್ರೂ ದೀಪಿಕಾ ಮುಖದಲ್ಲಿ ಯಾವುದೇ ಬದಲಾವಣೆ ಇಲ್ಲ, ಇನ್ನು ತೂಕ ಏರಿಕೆ ಆದಂತೆ ಕಾಣಿಸೋದಿಲ್ಲ. ಹೀಗಾಗಿ ದೀಪಿಕಾ ಪ್ರೆಗ್ನೆಂಟ್ ಅಲ್ಲವೇ ಅಲ್ಲ ಎನ್ನುವ ಸುದ್ದಿಗಳು ಹರಿದಾಡ್ತಿವೆ.
ದೀಪಿಕಾಗೆ 38ವರ್ಷ ಈ ವಯಸ್ಸಿನಲ್ಲಿ ಪ್ರೆಗ್ನೆನ್ಸಿ ಕಷ್ಟ, ಅದು ಅಲ್ಲದೆ ಸೆಲೆಬ್ರಿಟಿಗಳು ತಮ್ಮ ದೇಹದ ಬದಲಾವಣೆಯನ್ನು ಇಷ್ಟಪಡೋದಿಲ್ಲ. ದೀಪಿಕಾ ಸೆರೋಗೆಸಿ ಮೂಲಕ ಮಗು ಪಡೆಯುತ್ತಿದ್ದಾರೆ. ಆರ್ಟಿಫಿಶಿಯಲ್ ಹೊಟ್ಟೆಯನ್ನು ಇಟ್ಟುಕೊಂಡು ಓಡಾಡ್ತಿದ್ದಾರೆ ಎನ್ನುವ ಸುದ್ದಿ ಬಿಟೌನ್‌ನಲ್ಲಿ ಹರಿದಾಡ್ತಿದೆ.
ಇದಕ್ಕೆ ದೀಪಿಕಾ ಫ್ಯಾನ್ಸ್ ಗರಂ ಆಗಿದ್ದು, ಸೆಲೆಬ್ರಿಟಿಗಳು ಬೇಕಾದಷ್ಟು ಪೌಷ್ಠಿಕ ಆಹಾರ ಮಾತ್ರ ತಿಂತಾರೆ, ಇದರಿಂದ ಹೆಚ್ಚು ವೇಟ್ ಕಾಣಿಸುವುದಿಲ್ಲ. ಹೇಟರ್ಸ್ ಹರಡಿಸಿದ ಸುದ್ದಿ ಎಂದು ಹೇಳಿದ್ದಾರೆ.
View this post on Instagram