ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲ್ಕಿ ಹಾಗೂ ಜವಾನ್ ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ತಾಯಿಯ ಪಾತ್ರ ಮಾಡಿದ್ದಾರೆ. ನಿಜಜೀವನದಲ್ಲಿಯೂ ತಾಯಿಯಾಗಿರುವ ದೀಪಿಕಾ ಮತ್ತೊಮ್ಮೆ ಆನ್‌ಸ್ಕ್ರೀನ್‌ನಲ್ಲಿ ಅಮ್ಮನ ಪಾರ್ಟ್ ಮಾಡೋದಕ್ಕೆ ಒಪ್ಪಿಕೊಂಡಿದ್ದಾರೆ.
ಇದಕ್ಕೆಲ್ಲ ಕಾರಣ ಶಾರುಖ್ ಖಾನ್ ಎನ್ನಲಾಗಿದೆ. ಶಾರುಖ್ ಹಾಗೂ ದೀಪಿಕಾ ಮಧ್ಯೆ ಒಂದೊಳ್ಳೆ ಬಾಂಡಿಂಗ್ ಇದೆ. ಶಾರುಖ್‌ಗಾಗಿ ದೀಪಿಕಾ ಜವಾನ್ ಸಿನಿಮಾಕ್ಕೂ ಹಣ ಪಡೆಯದೇ ನಟನೆ ಮಾಡಿದ್ದರು. ಶಾರುಖ್ ಮಗಳ ಸಿನಿಮಾಗಾಗಿ ದೀಪಿಕಾ ಪಾತ್ರವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಸಿದ್ಧಾರ್ಥ್ ಆನಂದ್ ನಿರ್ದೇಶನದ ಕಿಂಗ್ ಸಿನಿಮಾದಲ್ಲಿ ಸುಹಾನಾ ಖಾನ್‌ಗೆ ದೀಪಿಕಾ ತಾಯಿಯಾಗಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.