IMDb ಟಾಪ್ 100 ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಟಾಪ್: ಕನ್ನಡಿಗನಿಗೂ ಇದೆ ಸ್ಥಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

IMDb ಅತಿ ಹೆಚ್ಚು ವೀಕ್ಷಿಸಿದ ಟಾಪ್ 100 ಭಾರತೀಯ ತಾರೆಯರ ಪಟ್ಟಿಯನ್ನು ಹಂಚಿಕೊಂಡಿದೆ.

2014 ಏಪ್ರಿಲ್​ನಿಂದ 2024ರ ಏಪ್ರಿಲ್​ ತನಕ ಐಎಂಡಿಬಿ ವೆಬ್​ಸೈಟ್​ನಲ್ಲಿ ಜನರು ಅತಿ ಹೆಚ್ಚು ವೀಕ್ಷಿಸಿದ ಸೆಲೆಬ್ರಿಟಿ ಪ್ರೊಫೈಲ್​ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಕಳೆದ ದಶಕದಲ್ಲಿ ಹೆಚ್ಚು ವೀಕ್ಷಿಸಿದ ಭಾರತೀಯ ತಾರೆಗಳಲ್ಲಿ ದೀಪಿಕಾ ಪಡುಕೋಣೆ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅವರ ನಂತರ ಶಾರುಖ್ ಖಾನ್ ಎರಡನೇ ಸ್ಥಾನದಲ್ಲಿದ್ದಾರೆ, ಐಶ್ವರ್ಯ ರೈ ಬಚ್ಚನ್ ಮೂರನೇ ಸ್ಥಾನದಲ್ಲಿದ್ದಾರೆ, ಆಲಿಯಾ ಭಟ್ ನಾಲ್ಕನೇ ಸ್ಥಾನದಲ್ಲಿದ್ದಾರೆ ಮತ್ತು ಇರ್ಫಾನ್ ಖಾನ್ ಐದನೇ ಸ್ಥಾನದಲ್ಲಿದ್ದಾರೆ. ಅಮೀರ್ ಖಾನ್ ಆರನೇ, ಸುಶಾಂತ್ ಏಳನೇ, ಸಲ್ಮಾನ್ ಖಾನ್ ಎಂಟನೇ, ಹೃತಿಕ್ ರೋಷನ್ ಒಂಬತ್ತನೇ ಮತ್ತು ಅಕ್ಷಯ್ ಕುಮಾರ್ ಹತ್ತನೇ ಸ್ಥಾನದಲ್ಲಿದ್ದಾರೆ.

ಇನ್ನು ವಿಶೇಷ ಎಂದರೆ ಈ ಬಾರಿ ಕನ್ನಡದ ನಟ ಯಶ್ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ರಾಕಿಂಗ್​ ಸ್ಟಾರ್​ ಯಶ್​​ 89ನೇ ಸ್ಥಾನದಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!