March 19, 2026
Thursday, March 19, 2026
spot_img

ಡಿಫೆನ್ಸ್ ಸ್ಟಾರ್ಟಪ್ ಖರೀದಿಸಿದ ದೀಪಿಂದರ್ ಗೋಯಲ್: ಹೊಸ ಹಾದಿಯಲ್ಲಿ ಜೊಮಾಟೊ ಸಂಸ್ಥಾಪಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಮಾಲಕತ್ವದ ಎಲ್‌ಎಟಿ ಏರೋಸ್ಪೇಸ್ ಕಂಪನಿ ಡಿಫೆನ್ಸ್ ಕ್ಷೇತ್ರದ ಸ್ಟಾರ್ಟಪ್‌ವೊಂದನ್ನು ಖರೀದಿ ಮಾಡಿದೆ.

ಗುರುಗ್ರಾಮ್ ಆಧಾರಿತ ‘ಶಾರಂಗ್ ಶಕ್ತಿ’ ಎಂಬ ರೋಬೋಟಿಕ್ಸ್ ಸಂಸ್ಥೆಯನ್ನು ಖರೀದಿ ಮಾಡಿರುವುದು ಕಂಪನಿಯ ವಿಸ್ತರಣಾ ಯೋಜನೆಗೆ ಮಹತ್ವದ ಬೆಳವಣಿಗೆ ಎಂದು ಹೇಳಲಾಗುತ್ತಿದೆ.

ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಮುಂದಿನ ತಲೆಮಾರಿನ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸುವ ಗುರಿ ಹೊಂದಿರುವ ಎಲ್‌ಎಟಿ ಏರೋಸ್ಪೇಸ್, ಡಿಫೆನ್ಸ್ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಮುಂದಾಗಿದೆ. ಸಾಮಾನ್ಯವಾಗಿ ರಕ್ಷಣಾ ಕ್ಷೇತ್ರದ ಕಂಪನಿಗಳು ನಾಗರಿಕ ವಿಮಾನಯಾನಕ್ಕೆ ಬರುವುದಿಲ್ಲ. ಆದರೆ ಎರಡೂ ಕ್ಷೇತ್ರಗಳಲ್ಲಿ ಪ್ರಮುಖ ತಂತ್ರಜ್ಞಾನಗಳು ಸಾಮಾನ್ಯವಾಗಿವೆ ಎಂಬ ನಂಬಿಕೆಯಲ್ಲಿ ಈ ಹೆಜ್ಜೆ ಇಡಲಾಗಿದೆ.

ಇದನ್ನೂ ಓದಿ:

2023ರಲ್ಲಿ ಆರಂಭವಾದ ಶಾರಂಗ್ ಶಕ್ತಿ ಇನ್ನೂ ಆರಂಭಿಕ ಹಂತದಲ್ಲಿದ್ದರೂ, ಸ್ವಂತ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವುದು ಗಮನ ಸೆಳೆದಿದೆ. ಈ ಸಾಮರ್ಥ್ಯವನ್ನು ಬಳಸಿಕೊಂಡು ಡಿಫೆನ್ಸ್ ಹಾಗೂ ಸಿವಿಲ್ ಏವಿಯೇಶನ್ ವಿಮಾನಗಳನ್ನು ರೂಪಿಸುವ ಉದ್ದೇಶ ಎಲ್‌ಎಟಿ ಏರೋಸ್ಪೇಸ್‌ಗೆ ಇದೆ.

ಸಣ್ಣ ಗಾತ್ರದ ಎಲೆಕ್ಟ್ರಿಕ್ ವಿಮಾನಗಳ ಮೂಲಕ ಕಡಿಮೆ ದರದಲ್ಲಿ ಪ್ರಯಾಣಾವಕಾಶ ಕಲ್ಪಿಸುವುದು ಗೋಯಲ್ ಅವರ ಮಹತ್ವಾಕಾಂಕ್ಷೆ. ಸಣ್ಣ ಪಟ್ಟಣಗಳ ನಡುವಿನ ಹಾರಾಟಗಳನ್ನು ಸುಲಭಗೊಳಿಸಿ ಸಾಮಾನ್ಯ ಜನರಿಗೆ ವಿಮಾನ ಪ್ರಯಾಣವನ್ನು ಹೆಚ್ಚು ಲಭ್ಯವಾಗಿಸುವುದು ಅವರ ಗುರಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !