ಹೊಸದಿಗಂತ ವರದಿ ಹಾವೇರಿ :
ಜಮೀನನ ಬಳಿ ಓಡಿ ಹೋಗುತ್ತಿದ್ದ ಜಿಂಕೆಯ ಮೇಲೆ ನಾಯಿಗಳು ದಾಳಿ ಮಾಡಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ರಾಮತೀರ್ಥಹೊಸಕೊಪ್ಪ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಳಿ ಇರೋ ಜಮೀನಿನಲ್ಲಿ ನಾಲ್ಕೈದು ನಾಯಿಗಳ ದಂಡು ಜಿಂಕೆಯ ಬೆನ್ನುಹತ್ತಿ ಎರಡು ಕಾಲಿಗೆ ಮತ್ತು ಮೈಯಿಗೆ ಗಾಯಗೊಳಿಸಿವೆ. ಜಿಂಕೆಯನ್ನು ರೈತ ಎಂ.ಎಂ. ಮುಲ್ಲಾ ಹಾಗೂ ಜಮೀನಲ್ಲಿರೋ ಇತರ ರೈತರು ರಕ್ಷಣೆ ಮಾಡಿದ್ದಾರೆ. ನಂತರ ಅರಣ್ಯ ಇಲಾಖೆಗೆ ಒಪ್ಪಿಸಿದ್ದು, ಪಶು ಆಸ್ಪತ್ರೆಯಲ್ಲಿ ಜಿಂಕೆಗೆ ಚಿಕಿತ್ಸೆ ಕೊಡಿಸಿದ್ದಾರೆ.
ಸದ್ಯ ಜಿಂಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಈ ಕುರಿತು ಹಾನಗಲ್ ಪೊಲೀಸ್ ಠಾಣೆ ಹಾಗೂ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.