ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡಿಗರ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಕುರಿತು FIR ಪ್ರಕರಣವನ್ನು ರದ್ದು ಮಾಡುವಂತೆ ಸೋನು ನಿಗಮ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇಂದು ಈ ಅರ್ಜಿಯ ವಿಚಾರಣೆ ನಡೆಯಬೇಕಿತ್ತು, ಆದರೆ ಅರ್ಜಿ ವಿಚಾರಣೆಯನ್ನು ಮೇ 15ಕ್ಕೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.
ಹೈಕೋರ್ಟ್ ನ್ಯಾ. ಶಿವಶಂಕರ್ ಅಮರಣ್ಣನವರ್ ಅವರ ಪೀಠದಲ್ಲಿ ವಿಚಾರಣೆ ನಡೆಯಲಿದೆ.
ಮ್ಯೂಸಿಕ್ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಯೊಬ್ಬ ಕನ್ನಡ ಹಾಡು ಹಾಡಿ ಎಂದು ಬೇಡಿಕೆ ಇಟ್ಟಿದ್ದಕ್ಕೆ ಕನ್ನಡಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಕೆ ಭಾರೀ ವಿವಾದ ಉಂಟಾಗಿತ್ತು.
ಅಲ್ಲದೇ ಈಗಾಗಲೇ ಕನ್ನಡಪರ ಸಂಘಟನೆ, ಕನ್ನಡ ಚಿತ್ರರಂಗದಿಂದಲೂ ಬ್ಯಾನ್ ಮಾಡಲಾಗಿತ್ತು. ವಿಚಾರಣೆಗಾಗಿ ಪೊಲೀಸ್ ನೋಟಿಸ್ ಕೂಡಾ ನೀಡಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆ ಸೋನು ನಿಗಮ್ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಕ್ಷಮೆ ಕೇಳಿದ್ದರು.