ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನರ ತೀರ್ಪಗೆ ಗೌರವ ನೀಡುತ್ತೇನೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ವೈಯುಕ್ತಿಕವಾಗಿ ಡಾ.ಸಿ.ಎನ್. ಮಂಜುನಾಥ್ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅಲ್ಲಿ ಪಕ್ಷ ಗೆದ್ದಿಲ್ಲ, ವ್ಯಕ್ತಿ ಗೆದ್ದಿದ್ದಾರೆಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣೆಯಲ್ಲಿ (Lok Election Results 2024) ಸಹೋದರ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಸೋಲಿನ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಚುನಾವಣೆಯಲ್ಲಿ ಇಷ್ಟು ಅಂತರದಲ್ಲಿ ಸೋಲುತ್ತೇವೆ ಎಂದು ಭಾವಿಸಿರಲಿಲ್ಲ. ಜನ ಸಂದೇಶ ನೀಡಿದ್ದಾರೆ, ನಾವು ಅರ್ಥ ಮಾಡಿಕೊಳ್ಳುತ್ತೇವೆ. ಜನರ ತೀರ್ಪಿನ ಬಗ್ಗೆ ಬೇರೆ ಮಾತಿಲ್ಲ ಎಂದು ಹೇಳಿದ್ದಾರೆ.
ಜನರ ತೀರ್ಪನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಗೌರವ ನೀಡುತ್ತೇನೆ. ದೇಶ ಮತ್ತು ರಾಜ್ಯದಲ್ಲಿ ಇರಬಹುದು, ಅಧಿಕಾರ ರಾಜಕೀಯಕ್ಕಿಂದ ವಿಶ್ವಾಸ ರಾಜಕೀಯ ಗೆದ್ದಿದೆ. ಭಾವನೆ ಸೋತಿದೆ, ಬದುಕು ಗೆದ್ದಿದೆ. ನಮ್ಮ ಸಾಧನೆ 1 ರಿಂದ 9 ಹೆಚ್ಚಾಗಿದೆ. ಎಲ್ಲಿ ಹೆಚ್ಚು ಕಮ್ಮಿ ಆಗಿದೆ ಎಂದು ನಾವು ಪರಿಶೀಲನೆ ಮಾಡುತ್ತೇವೆ. ಸೀಟ್ ಬೈ ಸೀಟ್ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಮೋದಿ ಜನಪ್ರಿಯತೆ ಕುಗ್ಗಿದೆ. ಒಡಿಶಾ, ಬಿಹಾರದಲ್ಲಿ ಮೈತ್ರಿಕೂಟದಿಂದ ನಂಬರ್ ಆಗಿದೆ. ಅಯೋಧ್ಯೆಯಲ್ಲಿ ಬಿಜೆಪಿಗೆ ಮುಖ ಭಂಗ ಆಗಿದೆ. ನನಗೆ ಹೇಗೆ ನಿರೀಕ್ಷೆ ಇರಲಿಲ್ಲವೋ ಹಾಗೇ ಬಿಜೆಪಿ ಮುಖ ಭಂಗ ಆಗಿದೆ. ನನ್ನ ಸಹೋದರ ಡಿ.ಕೆ.ಸುರೇಶ್ ಒಳ್ಳೆಯ ಕೆಲಸ ಮಾಡಿದ್ದರು, ಒಳ್ಳೆ ಅಭ್ಯರ್ಥಿ ಎಂದು ಮಂಜುನಾಥ ಗೆದಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಮೇಲೆ ವಿಶ್ವಾಸ ಜನ ಹೆಚ್ಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಗ್ರಾಮಾಂತರ ಕ್ಷೇತ್ರದಲ್ಲಿ ಒಳ್ಳೆಯ ಅಭ್ಯರ್ಥಿ ಹಾಕಿದ್ದಾರೆ. ಮಂಜುನಾಥ್ ಅವರು ಅಭ್ಯರ್ಥಿ ಆಗಿದ್ದು ಸಕ್ಸಸ್ ಫುಲ್ ಸ್ಟೋರಿ ಎಂದು ಮೆಚ್ಚುಗೆ ಸೂಚಿಸಿದ ಅವರು, ರಾಹುಲ್ ಗಾಂಧಿ, ಖರ್ಗೆ ಸಾಹೇಬರು ಹಾಗೂ ಭಾರತ ಜೋಡೋ ಪಕ್ಷದ ಬಗ್ಗೆ ವಿಶ್ವಾಸ ಹೆಚ್ಚಿಸಿದೆ. ಕಳೆದ ಚುನಾವಣೆಯಲ್ಲಿಕ್ಕಿಂತ ಈಗ ಮತ ಪ್ರಮಾಣ ಹೆಚ್ಚಾಗಿದೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡುವೆ ವ್ಯತ್ಯಾಸವಿದೆ. ಬಹಳ ಸಂತೋಷದಿಂದ ಜನ ತೀರ್ಪು ಸ್ವಾಗತ ಮಾಡುತ್ತೇನೆ. ವೈಯಕ್ತಿಕವಾಗಿ ನನಗೆ ಕೆಲ ಅನುಮಾನಗಳಿವೆ. ನನ್ನ ಕ್ಷೇತ್ರದಲ್ಲಿ 50-60 ಸಾವಿರ ಲೀಡ್ ಬರಬೇಕಿತ್ತು ಹೆಚ್ಚೂ-ಕಮ್ಮಿ ಆಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್‌ಗೆ 14 ರಿಂದ 15 ಸೀಟ್ ಬರುತ್ತದೆ ಎಂದು ಭಾವಿಸಿದ್ದೆವು. ಬೆಂಗಳೂರಿನಲ್ಲಿ ಒಂದು ಸ್ಥಾನ ಬರುತ್ತದೆ ಎಂದು ಭಾವಿಸಿದ್ದೆವು. ಕೆಲ ಸೆಕ್ಷನ್ ಶಿಫ್ಟ್ ಆಗಿದೆ ಎಂದ ಅವರು, ಎಕ್ಸಿಟ್ ಪೋಲ್ ಮೇಲೆ ನಂಬಿಕೆ ಇಲ್ಲ ಎಂದು ಮೊದಲೇ ಹೇಳಿದ್ದೆ. ಡಬಲ್ ಫಿಗರ್ ಕೊನೆಯವರೆಗೂ ಇತ್ತು. ಕೆಲಸಕ್ಕೆ ಮತ ಬಂದಿಲ್ಲ ಎಂದು ಬೇಸರ ಹೊರಹಾಕಿದರು.
ಸರಿಯಾಗಿ ಹೇಳಿದ್ದಾರೆ ಡಿಸಿಎಂ ಶಿವಕುಮಾರ್ ಸಾಹೇಬರು