ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಈ ಭಾರಿ ಲೋಕಸಭಾ ಚುನಾವಣೆ ಕುತೂಹಲ ಕೆರಳಿದೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ನಟ ಸುರೇಶ್ ಗೋಪಿ ಸೇರಿದಂತೆ ಪ್ರಮುಖ ನಾಯಕರು ಕಣದಲ್ಲಿದ್ದಾರೆ.
ಇದರ ಜೊತೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಎಕೆ ಆ್ಯಂಟೋನಿ ಪುತ್ರ ಅನಿಲ್ ಆ್ಯಂಟೋನಿ ಬಿಜೆಪಿಯ ಅಭ್ಯರ್ಥಿಯಾಗಿ ಪಟ್ಟಣಂತಿಟ್ಟ ನಲ್ಲಿ ಕಣಕ್ಕಿಳಿಯಲಿದ್ದಾರೆ.
ಇತ್ತ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಅನಿಲ್ ಆ್ಯಂಟೋನಿ ಕುರಿತು ತಂದೆ ಎಕೆ ಅ್ಯಂಟೋನಿ ಭವಿಷ್ಯ ನುಡಿದಿದ್ದಾರೆ. ಅದೇನಂದರೆ ಪಟ್ಟಣಂತಿಟ್ಟನಲ್ಲಿ ಅನಿಲ್ ಆ್ಯಂಟೊನಿಗೆ ಸೋಲು ಖಚಿತ ಎಂದಿದ್ದಾರೆ.
ಎಕೆ ಆ್ಯಂಟೋನಿ ಸುದ್ದಿಗೋಷ್ಠಿಯಲ್ಲಿ ಪಟ್ಟಣಂತಿಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆ್ಯಂಟೋ ಆಂಟೊನಿ ಗೆಲುವು ಸಾಧಿಸುವುದು ಖಚಿತ.ಬಿಜೆಪಿ ಅಭ್ಯಯರ್ಥಿ ಅನಿಲ್ ಸೋಲಲಿದ್ದಾರೆ. ಕೇರಳದಲ್ಲಿ ಮತೀಯವಾದ ಪಕ್ಷಗಳಿಗೆ ಜನ ಮನ್ನಣೆ ನೀಡುವುದಿಲ್ಲ. ಕೇರಳ ಜಾತ್ಯಾತೀತ ರಾಜ್ಯ ಎಂದು ಹೇಳಿದ್ದಾರೆ.
ನನ್ನ ಪುತ್ರ ಅನಿಲ್ ಆ್ಯಂಟೊನಿ ಬಿಜೆಪಿ ಸೇರಿಕೊಂಡಿರುವುದೇ ಮಹಾ ತಪ್ಪು. ಇದನ್ನು ನಾನು ಎಂದಿಗೂ ಒಪ್ಪಲು ಸಾಧ್ಯವಿಲ್ಲ. ನಾನು ಉಸಿರು, ಧರ್ಮ ಕಾಂಗ್ರೆಸ್. ಕಾಂಗ್ರೆಸ್ ಬಿಟ್ಟು ಬೇರೇನು ಯೋಚನೆ ಮಾಡುವುದಿಲ್ಲ. ಕೇರಳ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ನಿರಂತ ಹೋರಾಡುತ್ತಲೇ ಬಂದಿದೆ. ಹೀಗಾಗಿ ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೀಡಿದ ಹೇಳಿಕೆಯನ್ನು ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ. ಕೇರಳ ಜನರಿಗೆ ಬಿಜೆಪಿಯನ್ನು ದೂರವಿಡಬೇಕು. ಹೀಗಾಗಿ ರಾಹುಲ್ ಗಾಂಧಿ ವಿರುದ್ದ ಪಿಣರಾಯಿ ವಿಜಯನ್ ನೀಡಿದ ಹೇಳಿಕೆ ಮಹತ್ವ ಪಡೆದುಕೊಳ್ಳುವುದಿಲ್ಲ. ಬಿಜೆಪಿಯನ್ನು ದೂರವಿಡಲು ಕಾಂಗ್ರೆಸ್ ಹೋರಾಟಕ್ಕೆ ಇಂಡಿಯಾ ಒಕ್ಕೂಟದ ಬಲವಿದೆ ಎಂದು ಎಕೆ ಆ್ಯಂಟೊನಿ ಹೇಳಿದ್ದಾರೆ.