ಹಾಲಿ ಚಾಂಪಿಯನ್ ಇಂಗ್ಲೆಂಡ್ ಗೆ ಸೋಲಿನ ರುಚಿ ಉಣಿಸಿದ ಆಫ್ಘಾನಿಸ್ತಾನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಾಲಿ ಚಾಂಪಿಯನ್ ಇಂಗ್ಲೆಂಡ್ ಆಫ್ಘಾನಿಸ್ತಾನ ವಿರುದ್ಧ ಮುಗ್ಗರಿಸಿದೆಮೊದಲು ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಆಫ್ಘಾನಿಸ್ತಾನ 284 ರನ್ ಸಿಡಿಸಿತ್ತು. ಆದರೆ ಈ ಗುರಿ ಚೇಸ್ ಮಾಡಲು ಪರದಾಡಿದ ಇಂಗ್ಲೆಂಡ್ 215 ರನ್‌ಗೆ ಆಲೌಟ್ ಆಗಿದೆ. ಆಫ್ಘಾನಿಸ್ತಾನ 69 ರನ್ ಭರ್ಜರಿ ಗೆಲುವು ದಾಖಲಿಸಿದೆ.

285 ರನ್ ಟಾರ್ಗೆಟ್ ಪಡೆದ ಇಂಗ್ಲೆಂಡ್ ಚೇಸಿಂಗ್ ಮಾಡುವ ಆತ್ಮವಿಶ್ವಾಸದಲ್ಲಿತ್ತು. ಆದರೆ ನಿಗದಿತ ಓವರ್‌ನಲ್ಲಿ ಬಲಿಷ್ಠ ತಂಡವಾಗಿ ರೂಪುಗೊಂಡಿರುವ ಆಫ್ಘಾನಿಸ್ತಾನ ಬೌಲರ್ಸ್ ಇಂಗ್ಲೆಂಡ್ ಲೆಕ್ಕಾಚಾರ ಉಲ್ಟಾ ಮಾಡಿದರು. ಜಾನಿ ಬೈರ್‌ಸ್ಟೋ ಕೇವಲ 2 ರನ್ ಸಿಡಿಸಿ ಔಟಾದರು. ಜೂ ರೂಟ್ 11 ರನ್ ಸಿಡಿಸಿ ಔಟಾದರು. ಹೋರಾಟ ನೀಡಿದ ಡೇವಿಡ್ ಮಲನ್ 32 ರನ್ ಸಿಡಿಸಿ ನಿರ್ಗಮಿಸಿದರು.

ನಾಯಕ ಜೋಸ್ ಬಟ್ಲರ್ ಕೇವಲ 9 ರನ್ ಸಿಡಿಸಿ ಔಟಾದರು. ಮಜೀಬ್ ಯುಆರ್ ರಹಮಾನ್, ಮೊಹಮ್ಮದ್ ನಬಿ, ನವೀನ್ ಉಲ್ ಹಕ್ ಸೇರಿದಂತೆ ಆಫ್ಘಾನಿಸ್ತಾನ ಬೌಲರ್ ವಿಕೆಟ್ ಕಬಳಿಸಿ ಮಿಂಚಿದರು.

ಅಂತಿಮವಾಗಿ 40.3 ಓವರ್‌ಗಳಲ್ಲಿ 215 ರನ್‌ಗೆ ಆಲೌಟ್ ಆಯಿತು. ಆಫ್ಘಾನಿಸ್ತಾನ 69 ರನ್ ಗೆಲುವು ದಾಖಲಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!