ಹೊಸದಿಗಂತ ಡಿಜಿಟಲ್ ಡೆಸ್ಕ್:
‘ದೆಹಲಿ ಚಲೋ’ ಪ್ರತಿಭಟನೆ ಹಿಂನಿಎಲ್ ಹರಿಯಾಣ ಸರ್ಕಾರ ಗುರುವಾರ ಏಳು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಬೃಹತ್ ಎಸ್ಎಂಎಸ್ ಸೇವೆಗಳ ನಿಷೇಧವನ್ನ ಫೆಬ್ರವರಿ 17 ರವರೆಗೆ ಎರಡು ದಿನಗಳವರೆಗೆ ವಿಸ್ತರಿಸಿದೆ.
ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಈ ಜಿಲ್ಲೆಗಳು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.
ಫೆಬ್ರವರಿ 13 ರಂದು ರಾಜ್ಯ ಸರ್ಕಾರವು ಎರಡು ದಿನಗಳವರೆಗೆ ಸ್ಥಗಿತಗೊಳಿಸಿತ್ತು. ಇದೀಗ 17 ರವರೆಗೆ ವಿಸ್ತರಿಸಿದೆ.