ಜೈಲುಪಾಲಾದರೇನು, ಅಲ್ಲಿಂದಲೇ ಸರ್ಕಾರ ನಡೆಸುತ್ತಾರಂತೆ ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭ್ರಷ್ಟಾಚಾರ ವಿರೋಧಿಸಿ ಅಧಿಕಾರಕ್ಕೆ ಬಂದು ಭ್ರಷ್ಟಾಚಾರ ಆರೋಪದಲ್ಲಿಯೇ ಬಂಧಿತರಾಗಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜೈಲಿನಿಂದಲೇ ಆಡಳಿತ ನಡೆಸಲಿದ್ದಾರೆಯೇ?
ಹೌದು ಎನ್ನುತ್ತಿದೆ ಆಪ್!

ಈ ಬಗ್ಗೆ ಹೇಳಿಕೆ ನೀಡಿರುವ ಆಪ್ ನಾಯಕಿ ಅತಿಶಿ, ಅರವಿಂದ ಕೇಜ್ರಿವಾಲ್ ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ. ಆದರೆ ತಮ್ಮ ಖಾತೆಗಳನ್ನು ತ್ಯಜಿಸಲಿದ್ದಾರೆ. ಅಗತ್ಯಬಿದ್ದರೆ ಜೈಲಿನಿಂದಲೇ ಅವರು ಸರ್ಕಾರ ಚಲಾಯಿಸಲಿದ್ದಾರೆ ಎಂದಿದ್ದಾರೆ.

ಇಷ್ಟಕ್ಕೂ ಇದು ಸಾಧ್ಯವೇ? ಇದಕ್ಕೆ ಅವಕಾಶ ಇದೆಯೇ?

ಕಾನೂನಿನ ಪ್ರಕಾರ ಯಾವುದೇ ಮುಖ್ಯಮಂತ್ರಿ ಪ್ರಕರಣಗಳಲ್ಲಿ ಅಪರಾಧಿಯಾಗಿ ಶಿಕ್ಷೆಗೊಳಪಟ್ಟರೆ ಮಾತ್ರ ಅಧಿಕಾರ ಕಳೆದುಕೊಳ್ಳುತ್ತಾರೆ. ಜೈಲಿನಿಂದ ಸಿಎಂ ಹುದ್ದೆಯನ್ನು ನಿರ್ವಹಿಸುವುದನ್ನು ತಡೆಯಲು ಯಾವುದೇ ಕಾನೂನಿನಲ್ಲ. ದೇಶದಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗಲೇ ಬಂಧನಕ್ಕೊಳಗಾದ ಉದಾಹರಣೆಗಳಿವೆ. ಆದರೆ ಅವರು ಬಂಧನಕ್ಕೊಳಗಾದ ಬೆನ್ನಿಗೇ ಅಥವಾ ಅದಕ್ಕೂ ಮುನ್ನ ರಾಜಿನಾಮೆ ನೀಡಿದ್ದರು. ಅಧಿಕಾರದಲ್ಲಿರುವಾಗಲೇ ಬಂಧಿತರಾಗಿ ಇನ್ನೂ ರಾಜಿನಾಮೆ ನೀಡದ ಏಕೈಕ ರಾಜಕಾರಣಿಯಾಗಿ ಈಗ ಕೇಜ್ರಿವಾಲ್ ಗುರುತಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!